ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ ತಮ್ಮ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗದ ಬೇಸರದಲ್ಲಿ ಅಕ್ಷರಶಃ ಕಣ್ಣೀರು ಹಾಕಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಎದುರಾಳಿ ಆಟಗಾರ ಹಾರ್ದಿಕ್ ಪಾಂಡ್ಯರಿಂದ ಗಿಫ್ಟ್ ಸಿಕ್ಕಿದೆ.
									
			
			 
 			
 
 			
					
			        							
								
																	ಮುಂಬೈ ಇಂಡಿಯನ್ಸ್ ಪರ ಆಡುವ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವಿರುದ್ಧ ಸೋತ ಬೇಸರದಲ್ಲಿದ್ದ ಕೆಎಲ್ ರಾಹುಲ್ ಬಳಿ ತೆರಳಿ ಸಮಾಧಾನಿಸಿದ್ದಾರೆ.
									
										
								
																	ಅಷ್ಟೇ ಅಲ್ಲ, ಗೌರವಪೂರ್ವಕವಾಗಿ ಈ ಇಬ್ಬರೂ ಆಟಗಾರರು ಅಸಂಖ್ಯಾತ ವೀಕ್ಷಕರ ಎದುರೇ ಜೆರ್ಸಿ ಬಿಚ್ಚಿ ಎಕ್ಸ್ ಚೇಂಜ್ ಮಾಡಿಕೊಂಡಿದ್ದಾರೆ. ಅಂದರೆ ಪಾಂಡ್ಯರ ಜೆರ್ಸಿಯನ್ನು ರಾಹುಲ್ ತೊಟ್ಟರೆ, ರಾಹುಲ್ ಜೆರ್ಸಿಯನ್ನು ಪಾಂಡ್ಯ ತೊಟ್ಟುಕೊಂಡು ಗೌರವಾರ್ಪಣೆ ಮಾಡಿಕೊಂಡರು. ಇದಕ್ಕೆ ವೀಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.