Select Your Language

Notifications

webdunia
webdunia
webdunia
webdunia

IPL 2025: ಆರ್‌ಸಿಬಿ ತಂಡಕ್ಕೆ ಸಾರಥಿ ಯಾರು: ಕೋಚ್ ಆ್ಯಂಡಿ ಫ್ಲವರ್ ನೀಡಿದ್ರು ಮಹತ್ವದ ಸುಳಿವು

Royal Challengers Bangalore

Sampriya

ಬೆಂಗಳೂರು , ಶನಿವಾರ, 11 ಜನವರಿ 2025 (14:46 IST)
Photo Courtesy X
ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಮಾರ್ಚ್‌ನಲ್ಲಿ ಟೂರ್ನಿ ಆರಂಭವಾಗಿ ಮೇ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಈ ನಿಟ್ಟಿನಲ್ಲಿ ತಂಡಗಳು ಬಿರುಸಿನ ಸಿದ್ಧತೆಯಲ್ಲಿ ತೊಡಗಿವೆ.

ಈಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕನ ಬಗ್ಗೆ ಚರ್ಚೆ ಜೋರಾಗುತ್ತಿದೆ. ಐಪಿಎಲ್‌ ಸೀಸನ್-18 ರಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುವವರು ಯಾರು? ಈ ಪ್ರಶ್ನೆಗೆ ಈವರೆಗಿನ ಉತ್ತರ ವಿರಾಟ್ ಕೊಹ್ಲಿ ಆಗಿತ್ತು. ಆದರೀಗ ಕೊಹ್ಲಿಯೇ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಖಚಿತತೆ ಇಲ್ಲ. ಏಕೆಂದರೆ ಆರ್​ಸಿಬಿ ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಪ್ರಸ್ತುತ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿ 143 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ 66 ಪಂದ್ಯಗಳಲ್ಲಿ ಆರ್​ಸಿಬಿ ಜಯ ಸಾಧಿಸಿದೆ. ಹಾಗೆಯೇ 2016 ರಲ್ಲಿ ಕಿಂಗ್ ಕೊಹ್ಲಿ ನಾಯಕತ್ವದಲ್ಲೇ ಆರ್​ಸಿಬಿ ಫೈನಲ್​ಗೆ ಪ್ರವೇಶಿಸಿತ್ತು. ಇದೀಗ 18ನೇ ಸೀಸನ್​ನಲ್ಲಿ ಮತ್ತೆ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಆ್ಯಂಡಿ ಫ್ಲವರ್, ಆರ್​ಸಿಬಿ ತಂಡದ ಮುಂದಿನ ನಾಯಕ ಯಾರೆಂಬುದರ ಬಗ್ಗೆ ಇನ್ನೂ ಸಹ ಚರ್ಚೆ ನಡೆದಿಲ್ಲ. ಹೀಗಾಗಿ ಈಗಲೇ ನಾಯಕ ಯಾರೆಂದು ಹೇಳಲಾಗುವುದಿಲ್ಲ. ಮುಂದಿನ ಮೂರು ವರ್ಷಗಳನ್ನು ಮುಂದಿಟ್ಟುಕೊಂಡು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದೇವೆ ತಿಳಿಸಿದ್ದಾರೆ.

ಐಪಿಎಲ್ 2025 ರೊಂದಿಗೆ ಆರ್​ಸಿಬಿ ಹೊಸ ಯುಗವನ್ನು ಪ್ರಾರಂಭಿಸಲಿದೆ. ಮುಂದಿನ ಮೂರು ವರ್ಷಗಳ ಪ್ರಯಾಣವು ಇದರೊಂದಿಗೆ ಆರಂಭವಾಗಲಿದ್ದು, ತಂಡದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಹೀಗಾಗಿ ದೀರ್ಘಕಾಲದವರೆಗೆ ತಂಡವನ್ನು ಮುನ್ನಡೆಸಬಲ್ಲ ಆಟಗಾರನಿಗೆ ತಂಡದ ನಾಯಕತ್ವವನ್ನು ನೀಡಲಿದ್ದೇವೆ ಎಂದು ಆ್ಯಂಡಿ ಫ್ಲವರ್ ತಿಳಿಸಿದ್ದಾರೆ.

ಇದಾಗ್ಯೂ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲಿದ್ದೇವೆ ಅಥವಾ ಇಲ್ಲ ಎಂಬುದನ್ನು ಆ್ಯಂಡಿ ಫ್ಲವರ್ ಸ್ಪಷ್ಟಪಡಿಸಿಲ್ಲ. ನೀವು ಎಷ್ಟೇ ಬಾರಿ ಕೇಳಿದರೂ ಸದ್ಯಕ್ಕಂತು ಯಾರು ನಾಯಕರಾಗುತ್ತಾರೆ ಎಂದು ಹೇಳಲಾಗುವುದಿಲ್ಲ. ಈ ಬಗ್ಗೆ ಯಾವುದೇ ಚರ್ಚೆ ಕೂಡ ನಡೆದಿಲ್ಲ ಎಂದು ಆರ್​ಸಿಬಿ ಕೋಚ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೂ ಅದೇ ಪ್ರಾಬ್ಲಂ: ರಜೆಯೆಲ್ಲಾ ಕೊಡಕ್ಕಾಗಲ್ಲ ಎಂದ ಅಜಿತ್ ಅಗರ್ಕರ್