ನವದೆಹಲಿ: ಐಪಿಎಲ್ 2025 ರಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಕೆಎಲ್ ರಾಹುಲ್ ಗೆ ವಿರಾಟ್ ಕೊಹ್ಲಿ ತಮ್ಮ ತವರು ನೆಲದಲ್ಲಿ ಠಕ್ಕರ್ ಕೊಡ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಪಂದ್ಯಕ್ಕೆ ಮೊದಲು ಯಾರು ಏನಾರ ಹೇಳ್ಳಿ, ನಾವು ಫ್ರೆಂಡ್ಸ್ ಎಂದು ಸಾಬೀತುಪಡಿಸುವಂತಿದೆ ಈ ವಿಡಿಯೋ.
ಚಿನ್ನಸ್ವಾಮಿ ಮೈದಾನದಲ್ಲಿ ಡೆಲ್ಲಿ ತಂಡವನ್ನು ಗೆಲ್ಲಿಸಿದ ಬಳಿಕ ಕೆಎಲ್ ರಾಹುಲ್ ಇದು ನನ್ನ ತವರು ಎಂದು ವೃತ್ತ ಎಳೆದು ವಿಶಿಷ್ಟವಾಗಿ ಸಂಭ್ರಮಿಸಿದ್ದರು. ಇದು ಆರ್ ಸಿಬಿ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಡೆಲ್ಲಿಯಲ್ಲಿ ಗೆದ್ದು ಕೊಹ್ಲಿ ಕೂಡಾ ಇದೇ ರೀತಿ ನಿಮಗೆ ಠಕ್ಕರ್ ಕೊಡ್ತಾರೆ ಎಂದು ಅಭಿಮಾನಿಗಳು ಕತ್ತಿಮಸೆಯುತ್ತಿದ್ದಾರೆ.
ಆದರೆ ಇಂದಿನ ಪಂದ್ಯಕ್ಕೆ ಮುನ್ನ ಅಭ್ಯಾಸ ನಡೆಸುವಾಗ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮುಖಾಮುಖಿಯಾಗಿದ್ದಾರೆ. ಒಬ್ಬರನ್ನೊಬ್ಬರು ಕಾಣುತ್ತಲೇ ಪರಸ್ಪರ ಅಪ್ಪಿಕೊಂಡು ಸ್ವಲ್ಪ ಹೊತ್ತು ಖುಷಿ ಖುಷಿಯಾಗಿ ಮಾತನಾಡಿಸಿದ್ದಾರೆ. ಬಳಿಕ ಒಬ್ಬರಿಗೊಬ್ಬರು ಹಾರೈಸಿ ಮುನ್ನಡೆದಿದ್ದಾರೆ.
ಇದನ್ನು ನೋಡಿ ನೆಟ್ಟಿಗರು ಯಾರು ಏನೇ ಹೇಳಲಿ, ಕೊಹ್ಲಿ ಮೇಲೆ ಕೆಎಲ್ ರಾಹುಲ್ ಗಿರುವ ಗೌರವ ಕಡಿಮೆಯಾಗಲ್ಲ. ಜಿದ್ದಾಜಿದ್ದಿಗಳೆಲ್ಲಾ ಅಭಿಮಾನಿಗಳಿಷ್ಟೇ ಸೀಮಿತ ಎಂದಿದ್ದಾರೆ.
ಇಂದಿನ ಪಂದ್ಯದ ವಿಚಾರ ನೋಡುವುದಾದರೆ ಟಾಸ್ ಗೆದ್ದ ಆರ್ ಸಿಬಿ ಇಂದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಡೆಲ್ಲಿ ಇತ್ತೀಚೆಗಿನ ವರದಿ ಬಂದಾಗ 11 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಕೆಎಲ್ ರಾಹುಲ್ 23, ಅಕ್ಸರ್ ಪಟೇಲ್ 2 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.