ದೆಹಲಿ: ಐಪಿಎಲ್ 2025 ರಲ್ಲಿ ಇಂದು ಎಲ್ಲರೂ ನಿರೀಕ್ಷಿಸುತ್ತಿರುವ ಆರ್ ಸಿಬಿ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ಮ್ಯಾಚ್ ನಡೆಯಲಿದೆ. ಇದೀಗ ಆರ್ ಸಿಬಿ ಫ್ಯಾನ್ಸ್ ಕೆಎಲ್ ರಾಹುಲ್ ಗೆ ಸವಾಲು ಹಾಕಿದ್ದು ನಮ್ಮ ಕಿಂಗ್ ಕೊಹ್ಲಿ ತಾಕತ್ತು ಈವತ್ತು ನೋಡ್ಕೋ ಎನ್ನುತ್ತಿದ್ದಾರೆ.
ಕಳೆದ ಬಾರಿ ಎರಡೂ ತಂಡಗಳು ಮುಖಾಮುಖಿಯಾಗಿದ್ದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ. ಕೆಎಲ್ ರಾಹುಲ್ ಡೆಲ್ಲಿ ತಂಡದ ಪರ ಆಡುತ್ತಿದ್ದರೂ ಬೆಂಗಳೂರು ಅವರಿಗೆ ತವರು. ಹೀಗಾಗಿ ತಮ್ಮ ತಂಡವನ್ನು ಗೆಲ್ಲಿಸಿ ಕಾಂತಾರ ಸ್ಟೈಲ್ ನಲ್ಲಿ ವೃತ್ತ ಎಳೆದು ಇದು ನನ್ನ ಮನೆ ಎಂದು ಸಂಭ್ರಮಾಚರಣೆ ಮಾಡಿದ್ದರು.
ಇದು ಆರ್ ಸಿಬಿ ಫ್ಯಾನ್ಸ್ ಕೆರಳಿಸಿದೆ. ಇದೀಗ ಕೊಹ್ಲಿ ತವರು ದೆಹಲಿಯಲ್ಲಿ ಆರ್ ಸಿಬಿ ಮತ್ತು ಡೆಲ್ಲಿ ಮುಖಾಮುಖಿಯಾಗಲಿದೆ. ಮೊನ್ನೆ ಕೆಎಲ್ ರಾಹುಲ್ ಆ ರೀತಿ ಸೆಲೆಬ್ರೇಷನ್ ಮಾಡಿದ್ದಕ್ಕೆ ಕೊಹ್ಲಿ ಕೂಡಾ ಡೆಲ್ಲಿಯಲ್ಲಿ ಆರ್ ಸಿಬಿ ಗೆಲ್ಲಿಸಿ ಅದೇ ರೀತಿ ಸಂಭ್ರಮಿಸಬೇಕು ಎಂದು ಆಗ್ರಹಿಸಿದ್ದರು.
ಹೀಗಾಗಿ ಇಂದು ವಿರಾಟ್ ಕೊಹ್ಲಿ ಮೇಲೆ ಎಲ್ಲರ ನಿರೀಕ್ಷೆಯಿದೆ. ಇಂದು ಕೊಹ್ಲಿ ಆರ್ ಸಿಬಿ ತಂಡವನ್ನು ಗೆಲ್ಲಿಸಿದರೆ ಖಂಡಿತವಾಗಿಯೂ ಅವರಿಂದ ಒಂದು ವಿಶೇಷ ಸೆಲೆಬ್ರೇಷನ್ ನಿರೀಕ್ಷಿಸಬಹುದಾಗಿದೆ. ಇಂದು ಸಂಜೆ 7.30 ಕ್ಕೆ ಈ ಪಂದ್ಯ ನಡೆಯಲಿದೆ.