Select Your Language

Notifications

webdunia
webdunia
webdunia
webdunia

DC vs RCB Match: ಫ್ಯಾನ್ಸ್‌ ಕಾದಿದ್ದ ದಿನಕ್ಕೆ ಕ್ಷಣಗಣನೆ ಶುರು, ಕಿಂಗ್ ಕೊಹ್ಲಿ, ಕೆಎಲ್‌ ರಾಹುಲ್‌ಗೆ ಕೊಡ್ತಾರಾ ಕೌಂಟರ್‌

DC vs RCB ಪಂದ್ಯ

Sampriya

ಬೆಂಗಳೂರು , ಶನಿವಾರ, 26 ಏಪ್ರಿಲ್ 2025 (17:21 IST)
Photo Credit X
ಬೆಂಗಳೂರು: ನಾಳೆ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ 46ರ ಪಂದ್ಯಾಟದಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗಲಿದೆ.

ಆರ್‌ಸಿಬಿ ತನ್ನ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿತು. ಈ ಪಂದ್ಯಾಟದಲ್ಲಿ ಕನ್ನಡಿಗ ಕೆಎಲ್‌ ರಾಹುಲ್ ತನ್ನ ಅಮೋಘ ಬ್ಯಾಟಿಂಗ್ ಪ್ರದರ್ಶನ ಮೂಲಕ ಆರ್‌ಸಿವಿ ಪ್ರಾಂಚೈಸಿಗೆ ತಿರುಗೇಟು ನೀಡಿದ್ದರು.

ಅದಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೈ ಹೋಮ್, ಮೈ ಗ್ರೌಂಡ್ ಎಂದು ಕಾಂತಾರ ಸಿನಿಮಾ ರೀತಿಯಲ್ಲಿ ಅಬ್ಬರಿಸಿ ಗಮನಸೆಳೆದರು.

ಇನ್ನೂ ಕನ್ನಡಿಗ ಕೆಎಲ್‌ ರಾಹುಲ್‌ ಅವರ ಬ್ಯಾಟಿಂಗ್ ಪ್ರದರ್ಶನಕ್ಕೆ ಆರ್‌ಸಿಬಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಕೆಎಲ್ ರಾಹುಲ್‌ ಸಂದೇಶಕ್ಕೆ ಕೆಲವರು ತಿರುಗೇಟು ನೀಡಿ, ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಕಮೆಂಟ್ ಹಾಕಿದ್ದರು.

ಇದೀಗ ಆ ದಿನಕ್ಕೆ ಕ್ಷಣಗಣನೆ ಶುರುವಾಗಿದ್ದು, ನಾಳೆ ಮತ್ತೇ ಡೆಲ್ಲಿ ಕ್ಯಾಪಿಟಲ್ಸ್  ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದೆ. ನಾಳೆ ದೆಹಲಿಯಲ್ಲಿ ಆರ್‌ಸಿಬಿ ಗೆದ್ದು ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸುತ್ತಾ ಕಾದು ನೋಡಬೇಕಿದೆ,

ಐಪಿಎಲ್ 2025 ರಲ್ಲಿ ಎಂಟು ಪಂದ್ಯಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಆರು ಗೆಲುವು ಮತ್ತು ಎರಡು ಸೋಲು ಅನುಭವಿಸಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.

RCB ಇದುವರೆಗೆ ಎದುರಿಸಿದ 9 ಪಂದ್ಯಾಟಗಳಲ್ಲಿ 6ರಲ್ಲಿ ಗೆಲುವು ಸಾಧಿಸಿ, ತನ್ನ ತವರಿನಲ್ಲಿ ನಡೆದ ಮೂರು ಪಂದ್ಯಾಟಗಳಲ್ಲಿ ಸೋತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Sania Mirza: ಮುಂದೆ ಮೂರು ಬಾರಿ ಗರ್ಭಿಣಿಯಾಗಬಲ್ಲೆ, ಆದರೆ ಇದೊಂದು ಕೆಲಸ ಸಾಧ್ಯವಿಲ್ಲ ಎಂದ ಸಾನಿಯಾ ಮಿರ್ಜಾ