ಚೆನ್ನೈ: ಐಪಿಎಲ್‌ನ 43ನೇ ಇಂದಿನ ಪಂದ್ಯಾಟದಲ್ಲಿ CSK vs SRH ತಂಡ ಮುಖಾಮುಖಿಯಾಗಲಿದೆ.
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್‌ಗೆ ಆತಿಥ್ಯ ವಹಿಸಿದ್ದು, ಶುಕ್ರವಾರದಂದು ಚೆನ್ನೈನ MA ಚಿದಂಬರಂ ಸ್ಟೇಡಿಯಂನಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ ಕೆಳಭಾಗದಲ್ಲಿರುವ ತಂಡಗಳು ಮುಖಾಮುಖಿಯಾಗುತ್ತಿದೆ.
ಇದೀಗ ಟಾಸ್ ಗೆದ್ ಹೈದರಾಬಾದ್ ಮೊದಲು ಬೌಲಿಂಗ್ ಆಯ್ದುಕೊಂಡು, ಸಿಎಸ್‌ಕೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.
ಎರಡೂ ತಂಡಗಳು ಒಂದೇ ರೀತಿಯ ದಾಖಲೆಗಳನ್ನು ಹೊಂದಿವೆ: ಎರಡು ಗೆಲುವುಗಳು, ಆರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯಸ್ಥಾನದಲ್ಲಿದೆ.
ಎರಡೂ ತಂಡಗಳು IPL 2025 ಪ್ಲೇಆಫ್‌ಗಳ ಸ್ಥಾನವನ್ನು ಚೇಸ್ ಮಾಡಲು ಪ್ರಯತ್ನಿಸುತ್ತಿರುವ ವೇಳೆ ಸಾಕಷ್ಟು ಭಾರಿ ದಾರಿ ತಪ್ಪಿದ್ದರಿಂದ ಸಿಎಸ್‌ಕೆ 10 ಹಾಗೂ ಹೈದರಾಬಾದ್ 9ನೇ ಸ್ಥಾನದಲ್ಲಿದೆ.
CSK: ಶೇಕ್ ರಶೀದ್, ರಚಿನ್ ರವೀಂದ್ರ, ಆಯುಷ್ ಮ್ಹಾತ್ರೆ, ರವೀಂದ್ರ ಜಡೇಜಾ, ಶಿವಂ ದುಬೆ, ವಿಜಯ್ ಶಂಕರ್, ಜೇಮಿ ಓವರ್ಟನ್, MS ಧೋನಿ, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪತಿರಣ
CSK ಇಂಪ್ಯಾಕ್ಟ್ ಉಪ: ಆರ್ ಅಶ್ವಿನ್
SRH: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಪ್ಯಾಟ್ ಕಮ್ಮಿನ್ಸ್ , ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಜೀಶನ್ ಅನ್ಸಾರಿ, ಎಶನ್ ಮಾಲಿಂಗ