Select Your Language

Notifications

webdunia
webdunia
webdunia
webdunia

Gautam Gambhir: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಮರ್ಡರ್ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿ ಯಾರೆಂದು ಕೊನೆಗೂ ಪತ್ತೆ

Gautam Gambhir

Krishnaveni K

ನವದೆಹಲಿ , ಭಾನುವಾರ, 27 ಏಪ್ರಿಲ್ 2025 (10:01 IST)
ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ಯಾರೆಂದು ಕೊನೆಗೂ ಪತ್ತೆ ಮಾಡಿರುವ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಗೌತಮ್ ಗಂಭೀರ್ ಈ ಹೇಯ ಕೃತ್ಯಕ್ಕೆ ಪ್ರತ್ಯುತ್ತರ ಕೊಡಲೇಬೇಕು ಎಂದು ಘಟನೆ ಖಂಡಿಸಿದ್ದರು. ಇದರ ಬೆನ್ನಲ್ಲೇ ಗಂಭೀರ್ ಗೆ ಈ ಮೇಲ್ ಮೂಲಕ ಬೆದರಿಕೆ ಬಂದಿತ್ತು.

ಎರಡು ಬಾರಿ ಐಸಿಸ್ ಕಾಶ್ಮೀರ್ ಎನ್ನುವ ಖಾತೆಯಿಂದ ಬೆದರಿಕೆ ಈಮೇಲ್ ಬಂದ ಬಳಿಕ ಗಂಭೀರ್ ಎಚ್ಚೆತ್ತುಕೊಂಡು ರಾಜೇಂದ್ರ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಇದೀಗ ಗುಜರಾತ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಜಿಗ್ನೇಶ್ ಸಿಂಗ್ ಎಂಬಾತನೇ ಬೆದರಿಕೆ ಈಮೇಲ್ ಕಳುಹಿಸಿದ್ದ ಎಂದು ತಿಳಿದುಬಂದಿದೆ. ಆತನನ್ನು ಈಗ ಬಂಧಿಸಲಾಗಿದೆ. ಆದರೆ ಜಿಗ್ನೇಶ್ ಮಾನಸಿಕ ಅಸ್ವಸ್ಥ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಹಾಗಿದ್ದರೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

IPL 2025 RCB vs DC: ಕೆಎಲ್ ರಾಹುಲ್ ನೋಡ್ಕೋ ಈವತ್ತು ನಮ್ಮ ಕಿಂಗ್ ಕೊಹ್ಲಿ ತಾಕತ್ತು