2015ರಲ್ಲಿ ಆಸ್ಟ್ರೇಲಿಯಾದ ಪ್ರವಾಸದ ವೇಳೆ ವಿರಾಟ್ ಕೊಹ್ಲಿ ಅವರು ತಾನು ಡೇಟಿಂಗ್ ಮಾಡುತ್ತಿದ್ದ ಅನುಷ್ಕಾ ಶರ್ಮಾ ಅವರನ್ನು ಕರೆದುಕೊಂಡು ಬರಲೇ ಎಂದು ಫರ್ಮಿಶನ್ ಕೇಳಿಕೊಂಡಿರುವ ಬಗ್ಗೆ ಮಾಜಿ ಕೋಚ್ ವಿಶಾಸ್ತ್ರಿ ಅವರು ನೆನಪಿಸಿಕೊಂಡರು.
ಸದ್ಯ ರವಿಶಾಸ್ತ್ರಿ ಅವರು ಹೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ಶಾಸ್ತ್ರಿ ಅವರು, ನಾನು 2015 ರಲ್ಲಿ ಕೋಚ್ ಆಗಿದ್ದಾಗ ವೇಳೆ ನನಗೆ ನೆನಪಿದೆ, ಆಗ ವಿರಾಟ್ ಕೊಹ್ಲಿಗೆ ಮದುವೆಯಾಗಿರಲಿಲ್ಲ, ಅವನು ಅನುಷ್ಕಾ ಜೊತೆ ಡೇಟಿಂಗ್ ಮಾಡುತ್ತಿದ್ದನು. ಪ್ರವಾಸದ ವೇಳೆ ಕ್ರಿಕೆಟರ್‌ಗಳ ಜತೆ ಅವರ ಪತ್ನಿ ಹಾಗೂ ಮಕ್ಕಳಿಗಷ್ಟೇ ಕರೆತರಲು ಅವಕಾಶವಿದೆ. ಈ ವೇಳೆ ವಿರಾಟ್ ಹೆಂಡತಿಯರಿಗೆ ಮಾತ್ರ ಅವಕಾಶವಿದೆ, ನಾನು ನನ್ನ ಗೆಳತಿಯನ್ನು ಇಲ್ಲಿಗೆ ಕರೆದುಕೊಂಡು ಬರಬಹುದೆ ಎಂದು ಕೇಳಿಕೊಂಡಿದ್ದರು. ಆದರೆ ಅದಕ್ಕೆ ಬೋರ್ಡ್‌ನಿಂದ ಅವಕಾಶವಿಲ್ಲ ಎಂದು ಹೇಳಿದ್ದೆ.
ಪರ್ತ್‌ನಲ್ಲಿ ಮೂರನೇ ದಿನದಂದು ಕೊಹ್ಲಿಗಾಗಿ ಸ್ಟ್ಯಾಂಡ್‌ನಲ್ಲಿ ಅನುಷ್ಕಾ ಚಪ್ಪಾಳೆ ತಟ್ಟಿದರು, ಬ್ಯಾಟಿಂಗ್ ಮೆಸ್ಟ್ರೋ ಅವರು ಇತ್ತೀಚೆಗೆ ಅನುಭವಿಸಿದ ಕಠಿಣ ಸಮಯಗಳ ನಡುವೆ ಅವರ ಪತ್ನಿ ಬೆಂಬಲದ ಆಧಾರ ಸ್ತಂಭವಾಗಿದ್ದಾರೆ ಎಂದು ಬಹಿರಂಗಪಡಿಸಿದರು. ತಮ್ಮ ದೇಶಕ್ಕಾಗಿ ಪ್ರದರ್ಶನ ನೀಡುವುದರಲ್ಲಿ ನಾನು ಅತ್ಯಂತ ಹೆಮ್ಮೆಪಡುತ್ತೇನೆ ಎಂದು ಕೊಹ್ಲಿ ಬಹಿರಂಗಪಡಿಸಿದರು ಮತ್ತು ಫಾಕ್ಸ್ ಸ್ಪೋರ್ಟ್ಸ್‌ನಲ್ಲಿ ಶತಕ ಗಳಿಸಿದ ನಂತರ ಆಡಮ್ ಗಿಲ್‌ಕ್ರಿಸ್ಟ್‌ಗೆ ಹೇಳಿದರು.