ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಅವರು ತಮ್ಮ ಬಯೋಪಿಕ್ನಲ್ಲಿ ಯಾರು ಕಾಣಿಸಿಕೊಳ್ಳಬೇಕು ಎಂಬ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಬಾಲಿವುಡ್ ನಟ ರಣದೀಪ್ ಹೂಡಾ ಅವರನ್ನು ಆಯ್ಕೆ ಮಾಡಿದ್ದಾರೆ.
ಇಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ್ ನೀಡಿದ ಅವರು ನಿವೃತ್ತಿಯ ನಂತರ ಬಯೋಪಿಕ್ ಸಿನಿಮಾಗಳನ್ನು ಮಾಡುವುದು ಉತ್ತಮ. ಆಗ ವ್ಯಕ್ತಿಯ ಎಲ್ಲ ಸಾಧನೆಗಳನ್ನು ತೆರೆ ಮೇಲೆ ತೋರಿಸಲು ಸಾಧ್ಯವಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾರು ನಿಮ್ಮ ಬಯೋಪಿಕ್ನಲ್ಲಿ ನಟಿಸಲು ಸೂಕ್ತ ಎಂದು ಸಂದರ್ಶಕರು ಪ್ರಶ್ನಿಸಿದಾಗ ನಟ ರಣದೀಪ್ ಹೂಡಾ ಅವರು ನನ್ನ ಪಾತ್ರಕ್ಕೆ ಸೂಕ್ತ ಎಂದು ನನಗನಿಸುತ್ತದೆ. ಅವರೊಬ್ಬ ಉತ್ತಮ ನಟ. ಅಲ್ಲದೇ ಅವರು ಸಹ ಹರಿಯಾಣದವರು. ಯಾರು ನನ್ನ ಪಾತ್ರವನ್ನು ನಿರ್ವಹಿಸುತ್ತಾರೊ ಅವರು ನನ್ನ ಭಾಷೆಯನ್ನು ಬಲ್ಲವರಾಗಿರಬೇಕು ಎಂದು ಹೇಳಿದ್ದಾರೆ.
2020ರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಏಷ್ಯಾದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇನ್ನು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.