Select Your Language

Notifications

webdunia
webdunia
webdunia
webdunia

ರಂಗೇರಿದ ಹರಿಯಾಣ ವಿಧಾನಸಭೆ ಚುನಾವಣೆ: ನಾಮಪತ್ರ ಸಲ್ಲಿಸಿದ ಕುಸ್ತಿಪಟು ವಿನೇಶ್ ಫೋಗಟ್

Vinesha Phogat

Sampriya

ಹರಿಯಾಣ , ಬುಧವಾರ, 11 ಸೆಪ್ಟಂಬರ್ 2024 (17:28 IST)
Photo Courtesy X
ಹರಿಯಾಣ: ಕುಸ್ತಿಪಟು, ಹರಿಯಾಣ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಬುಧವಾರ ಜಿಂದ್ ಜಿಲ್ಲೆಯ ಜೂಲಾನಾದಿಂದ ನಾಮಪತ್ರ ಸಲ್ಲಿಸಿದರು.

ಆಕೆಯೊಂದಿಗೆ ಕಾಂಗ್ರೆಸ್ ನಾಯಕ ಮತ್ತು ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಸೋನಿಪತ್ ಸಂಸದ ಸತ್ಪಾಲ್ ಬ್ರಹ್ಮಚಾರಿ ಇದ್ದರು.

ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೀಪೇಂದರ್ ಹೂಡಾ, ಫೋಗಟ್ ಪಕ್ಷಕ್ಕೆ "ದೊಡ್ಡ ಗೆಲುವು" ನೀಡಲಿದ್ದಾರೆ ಮತ್ತು ಜುಲಾನಾದಲ್ಲಿ ಮಾತ್ರವಲ್ಲ, ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ
ಹರಿಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಡಾ ಸಾಹೇಬ್ ನಾಯಕತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು, ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಜನ ಮನಸ್ಸು ಮಾಡಿದ್ದಾರೆ.

ಜಾಟ್ ಪ್ರಾಬಲ್ಯದ ಜೂಲಾನಾ ಅಸೆಂಬ್ಲಿ ಕ್ಷೇತ್ರದಲ್ಲಿ ಒಲಿಂಪಿಯನ್ ಕುಸ್ತಿಪಟು ಫೋಗಟ್ ವಿರುದ್ಧ ಬಿಜೆಪಿ ಮಾಜಿ ವಾಣಿಜ್ಯ ಪೈಲಟ್ ಯೋಗೇಶ್ ಬೈರಾಗಿ ಅವರನ್ನು ಕಣಕ್ಕಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸೇರುತ್ತಿದ್ದಂತ್ತೆ ಪಿಟಿ ಉಷಾ ಮೇಲೆ ವಿನೇಶ್ ಫೋಗಟ್ ಗಂಭೀರ ಆರೋಪ