Select Your Language

Notifications

webdunia
webdunia
webdunia
webdunia

ನಾಗ್ಪುರದಲ್ಲಿ ಟೀಂ ಇಂಡಿಯಾ ಥ್ರೋ ಡೌನ್ ಸ್ಪೆಷಲಿಸ್ಟ್, ಕನ್ನಡಿಗ ರಘುವನ್ನೇ ತಡೆದ ಪೊಲೀಸರು

Raghu

Krishnaveni K

ನಾಗ್ಪುರ , ಮಂಗಳವಾರ, 4 ಫೆಬ್ರವರಿ 2025 (16:44 IST)
Photo Credit: X
ನಾಗ್ಪುರ: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವಾಡಲು ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾ ಆಟಗಾರರ ಜೊತೆಗಿದ್ದ ಥ್ರೋ ಡೌನ್ ಸಿಬ್ಬಂದಿ, ಕನ್ನಡಿಗ ರಘುವನ್ನು ಪೊಲೀಸರು ತಡೆದ ಘಟನೆ ನಡೆದಿದೆ.

ಎಲ್ಲಾ ಆಟಗಾರರ ಜೊತೆಗೆ ರಘು ಕೂಡಾ ಬ್ಲೂ ರಾಡಿಸನ್ ಹೋಟೆಲ್ ಒಳಗೆ ಹೋಗಲು ಸಿದ್ಧರಾಗಿದ್ದರು. ಆದರೆ ಅಷ್ಟರಲ್ಲಿ ಅವರನ್ನು ಪೊಲೀಸರು ತಡೆದಿದ್ದಾರೆ. ಅವರು ಸಹಾಯಕ ಸಿಬ್ಬಂದಿಗಳಲ್ಲಿ ಒಬ್ಬರು ಎಂಬುದು ಪೊಲೀಸರಿಗೆ ಗೊತ್ತಿರಲಿಲ್ಲ.

ಯಾರೋ ಅಭಿಮಾನಿ ಕ್ರಿಕೆಟಿಗರನ್ನು ನೋಡಲು ಧಾವಿಸುತ್ತಿದ್ದಾನೆ ಎಂದು ತಪ್ಪಾಗಿ ತಿಳಿದ ಪೊಲೀಸರು ಒಳ ಹೋಗಬೇಡಿ ಎಂದು ತಡೆದಿದ್ದಾರೆ. ಆದರೆ ಹಿಂದಿನಿಂದಲೇ ಬರುತ್ತಿದ್ದ ವಿಡಿಯೋಗ್ರಾಫರ್ ‘ಅರೇ ಕೋಚ್ ಅವರು.. ಅವರನ್ನು ಬಿಡಿ, ತಂಡದ ಬಸ್ ನಲ್ಲೇ ಬಂದಿರೋದು’ ಎಂದರು. ಆಗ ತಪ್ಪು ತಿದ್ದಿಕೊಂಡ ಪೊಲೀಸರು ರಘುವನ್ನು ಒಳ ಹೋಗಲು ಅನುಮತಿ ನೀಡಿದರು.

ರಘು ಕನ್ನಡಿಗರಾಗಿದ್ದು, ಟೀಂ ಇಂಡಿಯಾದಲ್ಲಿ ಬಹಳ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ತಂಡದ ಬ್ಯಾಟಿಗರನ್ನು ತಯಾರು ಮಾಡುವಲ್ಲಿ ರಘು ಪ್ರಧಾನ ಪಾತ್ರ ವಹಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾದಲ್ಲಿ ಕೊಂಚ ಬದಲಾವಣೆ