Select Your Language

Notifications

webdunia
webdunia
webdunia
webdunia

ಶಿಷ್ಯ ಅಭಿಷೇಕ್ ಶರ್ಮ ಅಬ್ಬರದ ಶತಕಕ್ಕೆ ಯುವರಾಜ್ ಸಿಂಗ್ ರಿಯಾಕ್ಷನ್ ಹೇಗಿತ್ತು ಗೊತ್ತಾ (ವಿಡಿಯೋ)

Abhishek Sharma

Krishnaveni K

ಮುಂಬೈ , ಸೋಮವಾರ, 3 ಫೆಬ್ರವರಿ 2025 (10:00 IST)
Photo Credit: X
ಮುಂಬೈ: ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಶಿಷ್ಯ ಅಭಿಷೇಕ್ ಶರ್ಮಾ ಅಬ್ಬರದ ಶತಕಕ್ಕೆ ಗುರು ಯುವರಾಜ್ ಸಿಂಗ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ನಿನ್ನೆಯ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು 37 ಎಸೆತಗಳಲ್ಲಿ ಶತಕವನ್ನೇ ಪೂರ್ತಿ ಮಾಡಿದ್ದರು. ಅಂತಿಮವಾಗಿ ಒಟ್ಟು 54 ಎಸೆತ ಎದುರಿಸಿದ ಅವರು 134 ರನ್ ಚಚ್ಚಿದ್ದರು. ಇದರಲ್ಲಿ 13 ಸಿಕ್ಸರ್, 7 ಬೌಂಡರಿ ಸೇರಿತ್ತು. ಇದು ಅವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಗಿತ್ತು.

ಪಂಜಾಬ್ ಮೂಲದ ಅಭಿಷೇಕ್ ಶರ್ಮಾ ಮೂಲತಃ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಗರಡಿಯಲ್ಲಿ ಬೆಳೆದವರು. ಗುರುವಿನಂತೇ ಶಿಷ್ಯನೂ ಅಬ್ಬರದ ಬ್ಯಾಟಿಂಗ್ ಗೆ ಹೆಸರು ವಾಸಿಯಾಗಿದ್ದಾರೆ. ಇದೀಗ ಅಭಿಷೇಕ್ ಸಿಡಿಲಬ್ಬರದ ಇನಿಂಗ್ಸ್ ಯುವಿ ಖುಷಿ ಹೆಚ್ಚು ಮಾಡಿದೆ.

ಶಿಷ್ಯನ ಶತಕದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು ‘ನಿನ್ನ ಬಗ್ಗೆ ನನಗೆ ಹೆಮ್ಮೆಯಿದೆ. ನಿನ್ನನ್ನು ಇಲ್ಲಿ ನೋಡಬೇಕೆಂದು ನಾನು ಬಯಸಿದ್ದೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಒಬ್ಬರಂತೂ ಈ ಗುರು-ಶಿಷ್ಯ ಜೋಡಿಗೆ ಇಂಗ್ಲೆಂಡ್ ಮೇಲೆ ಯಾಕೆ ಇಷ್ಟೊಂದು ಧ್ವೇಷವೋ ಎಂದು ತಮಾಷೆ ಮಾಡಿದ್ದಾರೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧವೇ ಯುವಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ಇದೀಗ ಅಭಿಷೇಕ್ ಕೂಡಾ ಇಂಗ್ಲೆಂಡ್ ವಿರುದ್ಧವೇ ಜೀವನಶ್ರೇಷ್ಠ ಇನಿಂಗ್ಸ್ ಆಡಿದ್ದಾರೆ. ಈ ಬಗ್ಗೆ ಅಭಿಮಾನಿಯೊಬ್ಬರು ವಿಡಿಯೋ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದು ಯುವಿ ಗಮನಕ್ಕೂ ಬಂದಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯವನ್ನು ಅಂತಿಮವಾಗಿ 150 ರನ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ 4-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

U19 Womens T20 World Cup: ಸತತ ಎರಡನೇ ಬಾರಿಗೆ ಅಂಡರ್ 19 ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ಕ್ರಿಕೆಟ್ ಪಡೆ