Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಗೇಲಿ ಮಾಡುತ್ತಿದ್ದ ಮುಂಬೈ ಪ್ರೇಕ್ಷಕರನ್ನು ಸುಮ್ಮನಾಗಿಸಿದ ರೋಹಿತ್ ಶರ್ಮಾ

Hardik Pandya-Rohit Sharma

Krishnaveni K

ಮುಂಬೈ , ಮಂಗಳವಾರ, 2 ಏಪ್ರಿಲ್ 2024 (09:45 IST)
ಮುಂಬೈ: ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ಗೇಲಿ ಮಾಡುತ್ತಿದ್ದ ಪ್ರೇಕ್ಷಕರನ್ನು ರೋಹಿತ್ ಶರ್ಮಾ ಸುಮ್ಮನಿರುವಂತೆ ಸೂಚನೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ಈ ಬಾರಿ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತೊಗೆದು ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದೆ. ಆದರೆ ಹಾರ್ದಿಕ್ ನಾಯಕತ್ವದಲ್ಲಿ ಇದುವರೆಗೆ ಒಂದೇ ಒಂದು ಗೆಲುವು ಕಂಡಿಲ್ಲ. ರೋಹಿತ್ ರನ್ನು ನಾಯಕತ್ವದಿಂದ ಕಿತ್ತೊಗೆದಿದ್ದಕ್ಕೆ ಅವರ ಅಭಿಮಾನಿಗಳಲ್ಲಿ ಆಕ್ರೋಶವಿದೆ.

ಹೀಗಾಗಿ ಹಾರ್ದಿಕ್ ರನ್ನು ಮೈದಾನದಲ್ಲಿ ಪ್ರೇಕ್ಷಕರು ಗೇಲಿ ಮಾಡುತ್ತಿದ್ದಾರೆ. ನಿನ್ನೆಯ ಪಂದ್ಯವಂತೂ ರೋಹಿತ್ ತವರು ಮುಂಬೈನಲ್ಲೇ ನಡೆದಿತ್ತು. ಹೀಗಾಗಿ ರೋಹಿತ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಸಹಜವಾಗಿಯೇ ಇಲ್ಲಿ ಹಾರ್ದಿಕ್ ರನ್ನು ಮೂದಲಿಸುವವರ ಸಂಖ್ಯೆ ಹೆಚ್ಚಾಗಿತ್ತು.

ಇದು ಮಿತಿ ಮೀರಿದಾಗ ಕೊನೆಗೆ ರೋಹಿತ್ ಮಧ‍್ಯಪ್ರವೇಶಿಸಿ ಪ್ರೇಕ್ಷಕರಿಗೆ ಸುಮ್ಮನಿರುವಂತೆ ಸೂಚಿಸಬೇಕಾಯಿತು. ಹಾರ್ದಿಕ್ ರನ್ನು ಹೀಯಾಳಿಸುತ್ತಿದ್ದ ಅಭಿಮಾನಿಗಳ ಕಡೆಗೆ ಕೈ ಸನ್ನೆ ಮಾಡಿ ಶಾಂತರಾಗಿರಿ ಎಂದು ರೋಹಿತ್ ಸೂಚಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024; ಮುಂಬೈ ಇಂಡಿಯನ್ಸ್ ಗೆ ಮೂರಕ್ಕೆ ಮೂರು ಸೋಲು, ರಾಜಸ್ಥಾನ್ ಗೆ ಹ್ಯಾಟ್ರಿಕ್ ಗೆಲುವು