Select Your Language

Notifications

webdunia
webdunia
webdunia
webdunia

ಐಪಿಎಲ್ 2024; ಮುಂಬೈ ಇಂಡಿಯನ್ಸ್ ಗೆ ಮೂರಕ್ಕೆ ಮೂರು ಸೋಲು, ರಾಜಸ್ಥಾನ್ ಗೆ ಹ್ಯಾಟ್ರಿಕ್ ಗೆಲುವು

Sanju Samon

Krishnaveni K

ಮುಂಬೈ , ಮಂಗಳವಾರ, 2 ಏಪ್ರಿಲ್ 2024 (08:49 IST)
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಮೂರಕ್ಕೆ ಮೂರು ಸೋಲು ಕಂಡರೆ ಅತ್ತ ರಾಜಸ್ಥಾನ್ ಮೂರನೇ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಮುಂಬೈ ಬ್ಯಾಟಿಂಗ್ ಸಂಪೂರ್ಣ ಹಳಿ ತಪ್ಪಿತ್ತು. ರೋಹಿತ್ ಶರ್ಮಾ ಗೋಲ್ಡನ್ ಡಕ್ ಆದರೆ ಅವರ ಹಿಂದೆಯೇ ನಮನ್ ಧೀರ್, ಡಿವಾಲ್ಡ್ ಬ್ರೆವಿಸ್ ಬಂದ ಎಸೆತಕ್ಕೇ ನಿರ್ಗಮಿಸಿದರು. ತಿಲಕ್ ವರ್ಮ 32, ಹಾರ್ದಿಕ್ ಪಾಂಡ್ಯ ರನ್ ಗಳಿಸದೇ ಹೋಗಿದ್ದರೆ ತಂಡದ ಸ್ಥಿತಿ ಶೋಚನೀಯವಾಗುತ್ತಿತ್ತು. ರಾಜಸ್ಥಾನ್ ಪರ ಟ್ರೆಂಟ್ ಬೌಲ್ಟ್, ಯಜುವೇಂದ್ರ ಚಾಹಲ್ ತಲಾ 3 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ ರಿಯಾನ್ ಪರಾಗ್ ಅಬ್ಬರದ ಅರ್ಧಶತಕದಿಂದಾಗಿ ಕೇವಲ 15.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ಗೆಲುವು ಕಂಡಿತು. ರಿಯಾನ್ ಪರಾಗ್ ಮತ್ತೊಮ್ಮೆ ಅದ್ಭುತ ಫಾರ್ಮ್ ಪ್ರದರ್ಶಿಸಿದ 39 ಎಸೆತಗಳಲ್ಲಿ 54 ರನ್ ಗಳಿಸಿದರು.

ಮುಂಬೈ ಪರ ಆಕಾಶ್ ಮಧ್ವಾಲ್ 3 ವಿಕೆಟ್ ಕಬಳಿಸಿ ಮಿಂಚಿದರು. ಆದರೆ ಅವರಿಗೆ ತಕ್ಕ ಸಾಥ್ ಸಿಗಲಿಲ್ಲ. ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ವಿಕೆಟ್ ಕೀಳಲು ವಿಫಲರಾದರು. ಮುಂಬೈ ಇದುವರೆಗೆ ಈ ಟೂರ್ನಿಯಲ್ಲಿ ಗೆಲುವೇ ಕಂಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಜಸ್ಟ್ ಫ್ಯಾನ್ಸ್ ಗೋಸ್ಕರ ಆಡ್ತಿದ್ದಾರೆ ಧೋನಿ ಎನ್ನುವುದಕ್ಕೆ ಇದೇ ಸಾಕ್ಷಿ