Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಗೆಲುವಿನ ಬೆನ್ನಲ್ಲೇ ರಿಷಬ್ ಪಂತ್ ಗೆ ದಂಡದ ಬರೆ

Rishab Pant

Krishnaveni K

ವಿಶಾಖಪಟ್ಟಣಂ , ಸೋಮವಾರ, 1 ಏಪ್ರಿಲ್ 2024 (11:45 IST)
ವಿಶಾಖಪಟ್ಟಣಂ: ಐಪಿಎಲ್ 2024 ರಲ್ಲಿ ಮೊದಲ ಗೆಲುವು ದಾಖಲಿಸಿದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಗೆ ದಂಡದ ಬರೆ ಸಿಕ್ಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 20 ರನ್ ಗಳ ಗೆಲುವು ಸಾಧಿಸಿದೆ. ರಿಷಬ್ ಪಂತ್ ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 51 ರನ್ ಗಳಿಸಿ ಫಾರ್ಮ್ ಗೆ ಮರಳಿದ್ದಾರೆ. ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಬೆನ್ನಲ್ಲೇ ರಿಷಬ್ ಗೆ ದಂಡದ ಬರೆ ಸಿಕ್ಕಿದೆ.

ನಿನ್ನೆಯ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಓವರ್ ಮುಗಿಸಿರಲಿಲ್ಲ. ಹೀಗಾಗಿ ಡೆಲ್ಲಿ ತಂಡಕ್ಕೆ ನಿಧಾನಗತಿಯ ಓವರ್ ನಡೆಸಿದ್ದಕ್ಕೆ ದಂಡ ವಿಧಿಸಲಾಗಿದೆ. ಅದರಂತೆ ನಾಯಕ ರಿಷಬ್ ಪಂತ್ ಗೆ ಪಂದ್ಯದ ಶುಲ್ಕದಲ್ಲಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಐಪಿಎಲ್ ನಿಯಮದ ಪ್ರಕಾರ ಪ್ರತಿ ತಂಡಗಳು 1 ಗಂಟೆ 30 ನಿಮಿಷದಲ್ಲಿ 20 ಓವರ್ ಪೂರ್ತಿ ಮಾಡಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ ನಿಂದ ಒಬ್ಬ ಫೀಲ್ಡರ್ ನನ್ನು ಕಡಿತ ಮಾಡಲಾಗುತ್ತದೆ. ಎರಡು ಬಾರಿ ಇದೇ ತಪ್ಪು ಮಾಡಿದರೆ 24 ಲಕ್ಷ ಮತ್ತು ಮೂರನೇ ಬಾರಿ ತಪ್ಪಾದರೆ ಪಂದ್ಯ ನಿಷೇಧಕ್ಕೊಳಗಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024 ರಲ್ಲಿ ಮೊದಲ ಗೆಲುವಿಗಾಗಿ ರಾಜಸ್ಥಾನ್ ವಿರುದ್ಧ ಆಡಲಿರುವ ಮುಂಬೈ ಇಂಡಿಯನ್ಸ್