Select Your Language

Notifications

webdunia
webdunia
webdunia
webdunia

IPL 2024: ನೆಟ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರಿಷಬ್ ಪಂತ್

Rishab Pant

Krishnaveni K

ನವದೆಹಲಿ , ಶುಕ್ರವಾರ, 15 ಮಾರ್ಚ್ 2024 (11:25 IST)
ನವದೆಹಲಿ: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈ ಬಾರಿ ಕ್ಯಾಪ್ಟನ್ ರಿಷಬ್ ಪಂತ್ ಪುನರಾಗಮನ ಮಾಡುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡು ರಿಷಬ್ ಬಹಳ ಸಮಯದ ನಂತರ ಮೈದಾನಕ್ಕಿಳಿಯುತ್ತಿದ್ದಾರೆ.

ರಸ್ತೆ ಅಪಘಾತವಾದ ನಂತರ ಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಿಷಬ್ ಪಂತ್ ಕ್ರಿಕೆಟ್ ಗೆ ಕಣಕ್ಕೆ ಮರಳುವಷ್ಟು ಫಿಟ್ ಆಗಿರುವುದೇ ಪವಾಡ. ಅವರಿಗೀಗ ಎನ್ ಸಿಎಯಿಂದ ಫಿಟ್ನೆಸ್ ಸರ್ಟಿಫಿಕೇಟ್ ದೊರೆತಿದ್ದು, ಬಹಳ ಸಮಯದ ನಂತರ ಸಕ್ರಿಯ ಕ್ರಿಕೆಟ್ ಮರಳುತ್ತಿದ್ದಾರೆ.

ಅವರನ್ನು ಮರಳಿ ಕ್ರಿಕೆಟ್ ಕಣದಲ್ಲಿ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ರಿಷಬ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆ ನೆಟ್ ಪ್ರಾಕ್ಟೀಸ್ ನಡೆಸಿದ್ದಾರೆ. ನೆಟ್ಸ್ ಅಭ್ಯಾಸದ ವೇಳೆ ರಿಷಬ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಎಂದಿನಂತೆ ಹೊಡೆಬಡಿಯ ಆಟದ ಮೂಲಕ ಗಮನ ಸೆಳೆದಿದ್ದಾರೆ.

ರಿಷಬ್ ಬ್ಯಾಟಿಂಗ್ ವಿಡಿಯೋ ಸೋಷಿಯಲ್‍ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಐಪಿಎಲ್ ನಲ್ಲಿ ಅವರಿಂದ ಮತ್ತೆ ಹಳೆಯ ಆಟ ನೋಡಬಹುದು ಎಂಬ ವಿಶ್ವಾಸವಿದೆ. ಈ ಐಪಿಎಲ್ ನಲ್ಲಿ ರಿಷಬ್ ಪಂತ್ ಬ್ಯಾಟಿಂಗ್ ಮತ್ತು ಕೀಪಿಂಗ್ ನಲ್ಲಿ ಪರಿಪೂರ್ಣ ಪ್ರದರ್ಶನ ನೀಡಿದರೆ ಟಿ20 ವಿಶ್ವಕಪ್ ನಲ್ಲೂ ಅವರು ಆಡಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯದ ಹೊರತಾಗಿಯೂ ಐಪಿಎಲ್ ತಂಡ ಸೇರಲು ಶ್ರೇಯಸ್ ಅಯ್ಯರ್ ರೆಡಿ