Select Your Language

Notifications

webdunia
webdunia
webdunia
webdunia

ಐಪಿಎಲ್ 2024 ರಲ್ಲಿ ಮೊದಲ ಗೆಲುವಿಗಾಗಿ ರಾಜಸ್ಥಾನ್ ವಿರುದ್ಧ ಆಡಲಿರುವ ಮುಂಬೈ ಇಂಡಿಯನ್ಸ್

Hardik Pandya

Krishnaveni K

ಮುಂಬೈ , ಸೋಮವಾರ, 1 ಏಪ್ರಿಲ್ 2024 (11:24 IST)
ಮುಂಬೈ: ಐಪಿಎಲ್ 2024 ರಲ್ಲಿ ಇಂದು ಇದುವರೆಗೆ ಗೆಲುವೇ ಕಾಣದ ಮುಂಬೈ ಇಂಡಿಯನ್ಸ್ ಮೊದಲ ಗೆಲುವಿಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವಾಡಲಿದೆ.

ಕಳೆದ ಎರಡೂ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಇನ್ನಿಲ್ಲದ ಪ್ರಯೋಗ ಮಾಡಲು ಹೋಗಿ ಸೋತು ಸುಣ್ಣವಾಗಿತ್ತು. ಅದರಲ್ಲೂ ಕಳೆದ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟಿಗರು ಮುಂಬೈ ಬೌಲಿಂಗ್ ನ್ನು ಯರ್ರಾ ಬಿರ್ರಿ ಚಚ್ಚಿದ್ದರು. ಇದರಿಂದಾಗಿ ನಾಯಕ ಹಾರ್ದಿಕ್ ಪಾಂಡ್ಯ ಸಾಕಷ್ಟು ಟೀಕೆಗೊಳಗಾಗಿದ್ದರು.

ಕಳೆದ ಎರಡೂ ಪಂದ್ಯಗಳಲ್ಲಿ ಮುಂಬೈ ನಾಯಕ ಹಾರ್ದಿಕ್ ಅನುಭವಿ ವೇಗಿ ಬುಮ್ರಾರನ್ನು ಆರಂಭಿಕರಾಗಿ ಕಣಕ್ಕಿಳಿಸದೇ ತಪ್ಪು ಮಾಡಿದ್ದಾರೆ. ಇದರ ಜೊತೆಗೆ ಸ್ವತಃ ಹಾರ್ದಿಕ್ ಹೇಳಿಕೊಳ್ಳುವಂತಹ ಫಾರ್ಮ್ ನಲ್ಲಿಲ್ಲ. ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ್ದರು.

ಇತ್ತ ರಾಜಸ್ಥಾನ್ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಸ್ವತಃ ನಾಯಕ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಜೊತೆಗೆ ಸಂದೀಪ್ ಶರ್ಮಾ ಡೆತ್ ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ರಾಜಸ್ಥಾನ್ ತಂಡಕ್ಕೆ ಮೇಲ್ನೋಟಕ್ಕೆ ಫೇವರಿಟ್ ಎನಿಸುತ್ತದೆ. ಆದರೆ ತವರಿನಲ್ಲಿ ಮುಂಬೈ ಇಂಡಿಯನ್ಸ್ ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ನೆನಪಿಡಬೇಕಾಗುತ್ತದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಲಾಂಗ್ ಹೇರ್..ಬಿಗ್ ಸಿಕ್ಸರ್..ಆಹಾ ಧೋನಿ ಎಂದ ಫ್ಯಾನ್ಸ್