Select Your Language

Notifications

webdunia
webdunia
webdunia
webdunia

ಲಸಿತ್ ಮಲಿಂಗಗೆ ಹಗ್ ಕೊಡದ ಹಾರ್ದಿಕ್ ಪಾಂಡ್ಯ ಮತ್ತೊಂದು ವಿವಾದದಲ್ಲಿ

Hardik Pandya

Krishnaveni K

ಹೈದರಾಬಾದ್ , ಶುಕ್ರವಾರ, 29 ಮಾರ್ಚ್ 2024 (15:52 IST)
ಹೈದರಾಬಾದ್: ಐಪಿಎಲ್ 2024 ರಲ್ಲಿ ಹೀನಾಯ ಪ್ರದರ್ಶನದಿಂದಾಗಿ ಭಾರೀ ಟೀಕೆಗೊಳಗಾಗಿರುವ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಬಳಿಕ ಪಾಂಡ್ಯ ಮುಂಬೈ ಬೌಲಿಂಗ್ ಕೋಚ್ ಲಸಿತ್ ಮಲಿಂಗಗೆ ಹಗ್ ಕೊಡಲು ನಿರಾಕರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಆ ಮೂಲಕ ಹಾರ್ದಿಕ್ ಪಾಂಡ್ಯ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ.

ಹೈದರಾಬಾದ್ ವಿರುದ್ಧ ಸೋತ ಬಳಿಕ ತಂಡದ ಎಲ್ಲಾ ಆಟಗಾರರು, ಕೋಚ್ ಗಳೂ ಪರಸ್ಪರ ಕೈಕುಲುಕಲು ಬಂದಾಗ ಈ  ಘಟನೆ ನಡೆದಿದೆ. ಹಾರ್ದಿಕ್ ಪಾಂಡ್ಯರನ್ನು ಮಲಿಂಗ ತಬ್ಬಿಕೊಳ್ಳಲು ಯತ್ನಿಸಿದಾಗ ಪಾಂಡ್ಯ ಅವರನ್ನು ತಳ್ಳಿ ಮುಂದೆ ನಡೆದಿದ್ದಾರೆ.

ಪಾಂಡ್ಯರ ಈ ವಿಡಿಯೋ ನೋಡಿದ ನೆಟ್ಟಿಗರು ಎಷ್ಟು ಕೊಬ್ಬು ತೋರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತತವಾಗಿ ಎರಡು ಪಂದ್ಯಗಗಳನ್ನು ಸೋಲಲು ಪಾಂಡ್ಯ ಕೆಟ್ಟ ಕ್ಯಾಪ್ಟನ್ಸಿ ಕಾರಣ. ಮಲಿಂಗ ಮುಂಬೈ ಫ್ರಾಂಚೈಸಿ ಜೊತೆ ಹಲವು ವರ್ಷಗಳಿಂದ ಇದ್ದಾರೆ. ಹಿರಿಯ ಬೌಲರ್ ಗೆ ತಂಡದ ನಾಯಕ ಕೊಂಚವಾದರೂ ಗೌರವ ತೋರಬಹುದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಚಿನ್ನಸ್ವಾಮಿಯಲ್ಲಿ ಇಂದು ಗಂಭೀರ್-ಕೊಹ್ಲಿ ಮುಖಾಮುಖಿ