Select Your Language

Notifications

webdunia
webdunia
webdunia
webdunia

IPL 2024: ವಿ ಲವ್ ಯೂ ಎಂದು ಹಾರ್ದಿಕ್ ಪಾಂಡ್ಯ ಪರ ಫ್ಯಾನ್ಸ್ ಅಭಿಯಾನ ಶುರು

Hardik Pandya

Krishnaveni K

ಮುಂಬೈ , ಗುರುವಾರ, 28 ಮಾರ್ಚ್ 2024 (14:49 IST)
ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿ ಸತತ ಎರಡು ಪಂದ್ಯಗಳನ್ನು ಸೋತು ಟೀಕೆಗೆ ಗುರಿಯಾಗಿರುವ ಹಾರ್ದಿಕ್ ಪಾಂಡ್ಯಗೆ ಈಗ ಅಭಿಮಾನಿಗಳ ಬೆಂಬಲ ಸಿಕ್ಕಿದೆ.

ರೋಹಿತ್ ಶರ್ಮಾರಿಂದ ನಾಯಕತ್ವ ಕಿತ್ತುಕೊಂಡು ತಾನು ಕಿಸಿಯಲಿಲ್ಲ ಎಂದು ಒಂದು ವರ್ಗದ ಫ್ಯಾನ್ಸ್ ಹಾರ್ದಿಕ್ ಮೇಲೆ ಸಿಕ್ಕಾಪಟ್ಟೆ ಟೀಕೆ ಮಾಡುತ್ತಿದ್ದಾರೆ. ಮೈದಾನದಲ್ಲೂ ಹಾರ್ದಿಕ್ ಬಂದಾಗ ಮೂದಲಿಸಿ ಅವಮಾನ ಮಾಡುತ್ತಿದ್ದಾರೆ. ಇದರ ನಡುವೆ ಹಾರ್ದಿಕ್ ಅಭಿಮಾನಿಗಳು ಅವರಿಗೆ ಬೆಂಬಲ ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಎಕ್ಸ್ ಪೇಜ್ ನಲ್ಲಿ ವಿ ಲವ್ ಯೂ ಹಾರ್ದಿಕ್, ವಿ ಸಪೋರ್ಟ್ ಹಾರ್ದಿಕ್ ಎಂಬಿತ್ಯಾದಿ ಹ್ಯಾಶ್ ಟ್ಯಾಗ್ ಬಳಸಿ ಮುಂಬೈ ನೂತನ ನಾಯಕನಿಗೆ ಅವರ ಅಭಿಮಾನಿಗಳು ಬೆಂಬಲ ನೀಡುತ್ತಿದ್ದಾರೆ. ಕೇವಲ ಎರಡು ಸೋಲುಗಳಿಂದ ಹಾರ್ದಿಕ್ ನಾಯಕತ್ವವನ್ನು ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಅವರ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.

ಇಂದು ಹಾರ್ದಿಕ್ ಪಾಂಡ್ಯರನ್ನು ಟೀಕೆ ಮಾಡುವವರು ಕೆಲವೇ ದಿನಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಫೈನಲ್, ಟಿ20 ವಿಶ್ವಕಪ್ ಸೋಲನ್ನು ಮರೆಯಬಾರದು ಎಂದು ಪರೋಕ್ಷವಾಗಿ ರೋಹಿತ್ ಶರ್ಮಾಗೆ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್ ಪಾಂಡ್ಯಗೆ ತಲೆಬಿಸಿ ತಂದಿಟ್ಟ ಶಿವಂ ದುಬೆ