Publish Date: Thu, 28 Mar 2024 (09:40 IST)
Updated Date: Thu, 28 Mar 2024 (09:44 IST)
ಚೆನ್ನೈ: ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ ಎರಡು ಪಂದ್ಯಗಳನ್ನು ಆಡಿ ಎರಡರಲ್ಲೂ ಗೆದ್ದಿದೆ. ಧೋನಿ ಈ ಐಪಿಎಲ್ ನಲ್ಲಿ ಸಾಮಾನ್ಯ ಆಟಗಾರನಾಗಿ ಆಡುತ್ತಿದ್ದಾರೆ.
ಈ ಬಾರಿ ಋತುರಾಜ್ ಗಾಯಕ್ ವಾಡ್ ತಂಡದ ನಾಯಕರಾಗಿದ್ದಾರೆ. ಧೋನಿ ಕೇವಲ ಕೀಪರ್ ಆಗಿದ್ದಾರೆ. ಹಾಗಿದ್ದರೂ ಅಗತ್ಯ ಬಂದಾಗ ತಂಡದ ನಾಯಕನಿಗೆ ಸಲಹೆ ಸೂಚನೆ ನೀಡುತ್ತಾ ಸೂಪರ್ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಅಭಿಮಾನಿಗಳಿಗೆ ಒಂದು ನಿರಾಸೆ ಕಾಡುತ್ತಿದೆ.
ಧೋನಿಗೆ ಬಹುಶಃ ಇದು ಕೊನೆಯ ಐಪಿಎಲ್ ಇರಬಹುದು. ಇನ್ನು ಅವರ ಬ್ಯಾಟಿಂಗ್ ನೋಡಲು ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಅನುಮಾನ ಅಭಿಮಾನಿಗಳಲ್ಲಿದೆ. ಆದರೆ ಕಳೆದ ಎರಡೂ ಪಂದ್ಯಗಳಲ್ಲಿ ಧೋನಿ ಬ್ಯಾಟಿಂಗ್ ಮಾಡಿಲ್ಲ. ಅವರು ಬ್ಯಾಟ್ ಮಾಡುವುದನ್ನು ನೋಡಲು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇದಕ್ಕೆ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಕಾರಣ ಎಂದು ಚೆನ್ನೈ ತಂಡ ಹೇಳಿಕೊಳ್ಳುತ್ತಿದೆ.
ಆದರೆ ಧೋನಿ ಬ್ಯಾಟ್ ಮಾಡದೇ ಇರುವುದರಿಂದ ಬೇಸರಗೊಂಡ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ತಲಾ ಧೋನಿ ಒಮ್ಮೆ ಬ್ಯಾಟ್ ಮಾಡಲು ಬನ್ನಿ. ನಿಮ್ಮ ಬ್ಯಾಟಿಂಗ್ ನೋಡಲು ಕಾಯುತ್ತಿದ್ದೇವೆ ಎಂದು ಮೆಸೇಜ್ ಮಾಡುತ್ತಿದ್ದಾರೆ.