Select Your Language

Notifications

webdunia
webdunia
webdunia
webdunia

ಐಪಿಎಲ್ 2024: ರಚಿನ್ ರವೀಂದ್ರರನ್ನು ಖರೀದಿಸದೆ ತಪ್ಪು ಮಾಡಿತಾ ಆರ್ ಸಿಬಿ

Rachin Ravindra

Krishnaveni K

ಚೆನ್ನೈ , ಬುಧವಾರ, 27 ಮಾರ್ಚ್ 2024 (12:05 IST)
Photo Courtesy: Twitter
ಚೆನ್ನೈ: ಐಪಿಎಲ್ 2024 ಮಿನಿ ಹರಾಜಿನಲ್ಲಿ ರಚಿನ್ ರವೀಂದ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಸ್ವತಃ ರಚಿನ್ ಗೆ ಬೆಂಗಳೂರು ತಂಡ ಸೇರುವ ಆಸೆಯಿತ್ತು.

ಆದರೆ ಆರ್ ಸಿಬಿ ಭಾರತೀಯ ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗನನ್ನು ಖರೀದಿಸಲೇ ಇಲ್ಲ. ಕೊನೆಗೆ ರಚಿನ್ ಚೆನ್ನೈ ತಂಡದ ಪಾಲಾದರು. ಆದರೆ ಇದೀಗ ಚೆನ್ನೈ ಪರ ರಚಿನ್ ಬೀಡು ಬೀಸಾದ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಿದರೆ ಆರ್ ಸಿಬಿ ತಪ್ಪು ಮಾಡಿತಾ ಎಂಬ ಅನುಮಾನ ಅಭಿಮಾನಿಗಳನ್ನು ಕಾಡಲು ಆರಂಭಿಸಿದೆ.

ಚೆನ್ನೈ ಪರ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಮತ್ತು ನಿನ್ನೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ರಚಿನ್ ಅಬ್ಬರದ ಆರಂಭ ನೀಡಿದ್ದಾರೆ. ಎರಡೂ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಅವರು ಚೆನ್ನೈ ರನ್ ಗತಿಯನ್ನು ಆರಂಭದಲ್ಲೇ ಏರಿಸಿದ್ದಾರೆ. ಇದನ್ನು ನೋಡಿ ಸಿಎಸ್ ಕೆಗೆ ರಚಿನ್ ಖರೀದಿಸಿದ್ದಕ್ಕೂ ಸಾರ್ಥಕವಾಯಿತು ಎನಿಸಿದೆ.

ಇತ್ತ ಆರ್ ಸಿಬಿಗೆ ಎರಡೂ ಪಂದ್ಯಗಳಲ್ಲಿ ಒಬ್ಬರು ಅಥವಾ ಇಬ್ಬರು ಬ್ಯಾಟಿಗರ ಕೊಡುಗೆಯಷ್ಟೇ ಕಂಡುಬಂದಿದೆ. ಹೀಗಾಗಿ ರಚಿನ್ ರಂತಹ ಪ್ರತಿಭಾವಂತ ಬ್ಯಾಟಿಗನ ಅವಶ್ಯಕತೆ ತಂಡಕ್ಕೆ ಅಗತ್ಯವಾಗಿತ್ತು. ಈಗ ಆರ್ ಸಿಬಿ ಅಭಿಮಾನಿಗಳೂ ರಚಿನ್ ರನ್ನು ಆಯ್ಕೆ ಮಾಡದೇ ಇದ್ದಿದ್ದಕ್ಕೆ ಫ್ರಾಂಚೈಸಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಹೈದರಾಬಾದ್ ನಲ್ಲಿಂದು ಸನ್ ರೈಸರ್ಸ್-ಮುಂಬೈ ಇಂಡಿಯನ್ಸ್ ನಡುವೆ ಕದನ