Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಸತತ ಎರಡನೇ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ಗೆ ಫುಲ್ ಟೆನ್ಷನ್

Tilak Verma

Krishnaveni K

ಹೈದರಾಬಾದ್ , ಗುರುವಾರ, 28 ಮಾರ್ಚ್ 2024 (08:45 IST)
Photo Courtesy: Mumbai Indians Twitter
ಹೈದರಾಬಾದ್: ಐಪಿಎಲ್ 2024 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 31 ರನ್ ಗಳ ಸೋಲು ಅನುಭವಿಸಿದೆ. ಇದು ಈ ಕೂಟದಲ್ಲಿ ಮುಂಬೈಗೆ ಸತತ ಎರಡನೇ ಸೋಲಾಗಿದೆ.

ರೋಹಿತ್ ಶರ್ಮಾರನ್ನು ಹೊರಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ ಬಳಿಕ ಮುಂಬೈ ಲಕ್ ಯಾಕೋ ಮೊದಲಿನಂತಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿದೆ. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತ ಗಳಿಸಿತು.

ಈ ಮೊತ್ತ ಬೆನ್ನತ್ತಿದ ಮುಂಬೈ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಕೂಡಾ ಸಾಕಷ್ಟು ಹೋರಾಟ ನಡೆಸಿಯೇ ಸೋಲೊಪ್ಪಿಕೊಂಡಿತು ಎನ್ನಬಹುದು. ಮುಂಬೈ ಪರ ರೋಹಿತ್ ಶರ್ಮಾ 12 ಎಸೆತಗಳಲ್ಲಿ 26, ಇಶಾನ್ ಕಿಶನ್ 13 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು. ನಮನ್ ಧೀರ್ 14 ಎಸೆತಗಳಿಂದ 30 ರನ್ ಸಿಡಿಸಿದರು. ಆದರೆ ತಂಡಕ್ಕೆ ಹೊಸ ಭರವಸೆ ತುಂಬಿದ್ದು ತಿಲಕ್ ವರ್ಮ. 34 ಎಸೆತ ಎದುರಿಸಿದ ಅವರು 64 ರನ್ ಗಳಿಸಿದರು.

ಆದರೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತೆ ವಿಫಲರಾದರು. 20 ಎಸೆತ ಎದುರಿಸಿದ ಅವರು ಗಳಿಸಿದ್ದು ಕೇವಲ 24 ರನ್. ಆದರೆ ಟಿಮ್ ಡೇವಿಡ್ 22 ಎಸೆತಗಳಿಂದ ಅಜೇಯ 42 ರನ್ ಸಿಡಿಸಿದರಾದರೂ ಪ್ರಯೋಜನವಾಗಲಿಲ್ಲ. ಇದರೊಂದಿಗೆ ಮುಂಬೈ ಮತ್ತೊಂದು ಸೋಲಿಗೆ ಶರಣಾಯಿತು. ಈ ಸೋಲಿನ ಬಳಿಕ ಮುಂಬೈ ಆಟಗಾರರ ಮುಖದಲ್ಲಿ ಹತಾಶೆ ಎದ್ದು ಕಾಣುತ್ತಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತ ಪೇರಿಸಿದ ಸನ್ ರೈಸರ್ಸ್ ಹೈದರಾಬಾದ್