Publish Date: Thu, 28 Mar 2024 (09:11 IST)
Updated Date: Thu, 28 Mar 2024 (09:13 IST)
ಹೈದರಾಬಾದ್: ಐಪಿಎಲ್ 2024 ರಲ್ಲಿ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾರನ್ನು ಸೈಡ್ ಲೈನ್ ಮಾಡಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟೀಕೆಗೊಳಗಾಗಿದ್ದಾರೆ.
ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ಬುಮ್ರಾ ಬದಲು ತಾವೇ ಬೌಲಿಂಗ್ ಆರಂಭಿಸಿ ಹಾರ್ದಿಕ್ ಎದುರಾಳಿಗಳಿಂದ ಸರಿಯಾಗಿಯೇ ಪೆಟ್ಟು ತಿಂದಿದ್ದರು. ಇದೀಗ ಹೈದರಾಬಾದ್ ವಿರುದ್ಧ ಎರಡನೇ ಪಂದ್ಯದಲ್ಲೂ ಮತ್ತದೇ ತಪ್ಪು ಮಾಡಿದರು. ಬುಮ್ರಾರನ್ನು ಮೂರನೇ ಓವರ್ ಗೆ ಒಮ್ಮೆ ಬೌಲಿಂಗ್ ಗಿಳಿಸಿ ಮತ್ತೆ 12 ಓವರ್ ಗಳ ನಂತರ ಕರೆತಂದರು.
ಆದರೆ ಅಷ್ಟರಲ್ಲಿ ಹೈದರಾಬಾದ್ ಸ್ಕೋರ್ 14 ಓವರ್ ಗಳಲ್ಲೇ 200 ದಾಟಿತ್ತು. ಸಾಮಾನ್ಯವಾಗಿ ಟೀಂ ಇಂಡಿಯಾ ಇರಲಿ, ಐಪಿಎಲ್ ಇರಲಿ ಬುಮ್ರಾರನ್ನು ಆರಂಭಿಕ ಬೌಲರ್ ಆಗಿಯೇ ಕಣಕ್ಕಿಳಿಸಲಾಗುತ್ತದೆ. ಡೆತ್ ಓವರ್ ನಂತೆ ಹೊಸ ಚೆಂಡಿನಲ್ಲೂ ಅವರು ಅದ್ಭುತವಾಗಿ ಬೌಲಿಂಗ್ ಮಾಡಬಲ್ಲರು.
ಆದರೆ ಬುಮ್ರಾ ತಾವು ನಾಯಕರಾದ ಮೇಲೆ ಮುಂಬೈ ತಂಡದಲ್ಲಿ ಅನಗತ್ಯ ಪ್ರಯೋಗ ಮಾಡಲು ಹೋಗಿ ಎಲ್ಲರ ಟೀಕೆಗೊಳಗಾಗುತ್ತಿದ್ದಾರೆ. ಮುಂಬೈ ಅಭಿಮಾನಿಗಳಂತೂ ರೋಹಿತ್, ಬುಮ್ರಾರಂತಹ ಅನುಭವಿಗಳನ್ನು ಸೈಡ್ ಲೈನ್ ಮಾಡುತ್ತಿರುವುದಕ್ಕೆ ಟೀಕೆಗೊಳಗಾಗಿದ್ದಾರೆ.