Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಜೈಪುರದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್-ರಾಜಸ್ಥಾನ್ ರಾಯಲ್ಸ್ ಕದನ

IPL 2024

Krishnaveni K

ಜೈಪುರ , ಗುರುವಾರ, 28 ಮಾರ್ಚ್ 2024 (11:43 IST)
ರಾಜಸ್ಥಾನ್ ರಾಯಲ್ಸ್ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್ ಲೈವ್, ಐಪಿಎಲ್ 2024 ಲೈವ್, ರಿಷಬ್ ಪಂತ್
ಜೈಪುರ: ಐಪಿಎಲ್ 2024 ರಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಡೆಲ್ಲಿ ಮೊದಲ ಗೆಲುವಿಗಾಗಿ ಪ್ರಯತ್ನ ನಡೆಸಲಿದೆ.


ಮೊದಲ ಪಂದ್ಯದಲ್ಲಿ ರಿಷಬ್ ಪಂತ್ ಪಡೆ ಪಂಜಾಬ್ ಕಿಂಗ್ಸ್ ವಿರುದ್ಧ ಮುಗ್ಗರಿಸಿತ್ತು. ಬಹಳ ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಮರಳಿದ್ದ ರಿಷಬ್ ಪಂತ್ ಗೆ ಸೋಲಿನ ಸ್ವಾಗತ ದೊರಕಿತ್ತು. ಡೇವಿಡ್ ವಾರ್ನರ್, ಪೃಥ್ವಿ ಶಾರಂತಹ ಹೊಡೆಬಡಿಯ ಆಟಗಾರರಿದ್ದೂ ಡೆಲ್ಲಿ ತಂಡದ ಬ್ಯಾಟಿಂಗ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

ಹಾಗೆ ನೋಡಿದರೆ ಡೆಲ್ಲಿ ತಂಡದಲ್ಲಿ ಕುಲದೀಪ್ ಯಾದವ್, ಅನ್ ರಿಚ್ ನೋರ್ಟ್ಜೆ, ಅಕ್ಸರ್ ಪಟೇಲ್ ರಂತಹ ಪ್ರತಿಭಾವಂತಹ ಬೌಲರ್ ಗಳಿದ್ದಾರೆ. ಆದರೆ ಅನುಭವಿ ವೇಗಿ ಇಶಾಂತ್ ಶರ್ಮಾ ಗಾಯಗೊಂಡಿದ್ದರು. ಹಾಗಿದ್ದರೂ ಅವರ ಸ್ಥಾನ ತುಂಬಬಲ್ಲ ಆಟಗಾರರು ಡೆಲ್ಲಿ ಬಳಿಯಿದ್ದಾರೆ.

ಇನ್ನೊಂದೆಡೆ ರಾಜಸ್ಥಾನ್ ತಂಡ ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ಬಲಿಷ್ಠವಾಗಿದೆ. ಸ್ವತಃ ನಾಯಕ ಸಂಜು ಫಾರ್ಮ್ ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಜೊತೆಗೆ ಧ‍್ರುವ್ ಜುರೆಲ್, ಶಿಮ್ರೋನ್ ಹೆಟ್ಮೈರ್, ಯಶಸ್ವಿ ಜೈಸ್ವಾಲ್ ರಂತಹ ಘಟಾನುಘಟಿ ಬ್ಯಾಟಿಗರಿದ್ದಾರೆ. ಹೀಗಾಗಿ ಡೆಲ್ಲಿಯ ವಿರುದ್ಧ ಮೇಲ್ನೋಟಕ್ಕೆ ರಾಜಸ್ಥಾನ್ ತಂಡವೇ ಫೇವರಿಟ್ ಎನಿಸುತ್ತಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆಗೆ ಸಾನಿಯಾ ಮಿರ್ಜಾ ಸ್ಪರ್ಧೆ