ವಿಶಾಖಪಟ್ಟಣ: ಐಪಿಎಲ್ 2024 ರ ಇಂದಿನ ಎರಡನೇ ಪಂದ್ಯದಲ್ಲಿ ಇದುವರೆಗೆ ಗೆಲುವೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಸೋಲೇ ಕಾರಣದ ಸಿಎಸ್ ಕೆ ತಂಡವನ್ನು ಎದುರಿಸಲಿದೆ. 
									
			
			 
 			
 
 			
					
			        							
								
																	ಸಿಎಸ್ ಕೆಗೆ ಅಧಿಕೃತವಾಗಿ ಋತುರಾಜ್ ಗಾಯಕ್ ವಾಡ್ ನಾಯಕರಾದರೂ ತಂಡ ಇನ್ನೂ ಧೋನಿ ಅಣತಿಯಂತೇ ಯೋಜನೆ ರೂಪಿಸುತ್ತಿದೆ. ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಚೆನ್ನೈ ಅಧಿಕಾರಯುತವಾಗಿ ಗೆದ್ದಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದೆ. ಹೀಗಾಗಿ ಚೆನ್ನೈ ಸೋಲಿಸುವುದು ಅಷ್ಟು ಸುಲಭವಲ್ಲ.
									
										
								
																	ಎಲ್ಲಕ್ಕಿಂತ ಹೆಚ್ಚು ಅಭಿಮಾನಿಗಳು ಧೋನಿ ಬ್ಯಾಟಿಂಗ್ ಮಾಡುವುದನ್ನು ನೋಡಲು ಕಾಯುತ್ತಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಧೋನಿ ಬ್ಯಾಟಿಂಗ್ ಮಾಡದೇ ಕೇವಲ ವಿಕೆಟ್ ಕೀಪಿಂಗ್ ಮಾಡಿದ್ದರು. ಆದರೆ ಈ ಪಂದ್ಯದಲ್ಲಾದರೂ ಬ್ಯಾಟಿಂಗ್ ಗೆ ಬರಬಹುದು ಎಂಬ ವಿಶ್ವಾಸವಿದೆ.
									
											
							                     
							
							
			        							
								
																	ಇನ್ನೊಂದೆಡೆ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಗೆ ಯಾಕೋ ಈ ಬಾರಿ ಅದೃಷ್ಟ ಕೈ ಕೊಟ್ಟಿದೆ. ರಿಷಬ್ ನಾಯಕರಾಗಿ ಕಮ್ ಬ್ಯಾಕ್ ಮಾಡಿದ ಮೇಲೆ ತಂಡ ಸುಧಾರಿಸಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕಳೆದ ಎರಡೂ ಪಂದ್ಯಗಳಲ್ಲಿ ಡೆಲ್ಲಿ ಬ್ಯಾಟಿಂಗ್ ಕ್ಲಿಕ್ ಆಗಿಲ್ಲ. ಇಂದು ಕಠಿಣ ಎದುರಾಳಿ ಚೆನ್ನೈ ವಿರುದ್ಧ ಗೆಲ್ಲಬೇಕಾದರೆ ರಿಷಬ್ ಪಡೆ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನ ನೀಡಬೇಕಾಗುತ್ತದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.