Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಪಂಜಾಬ್ ವಿರುದ್ಧ ಸಿಎಸ್ ಕೆಗೆ ಸೋಲಿನ ಆಘಾತ

CSK

Krishnaveni K

ಚೆನ್ನೈ , ಗುರುವಾರ, 2 ಮೇ 2024 (08:21 IST)
ಚೆನ್ನೈ: ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದೆ. ಈ ಮೂಲಕ ಸಿಎಸ್ ಕೆ ತವರಿನಲ್ಲೇ ಸೋಲಿನ ಆಘಾತ ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಅಜಿಂಕ್ಯಾ ರೆಹಾನೆ 29, ಋತುರಾಜ್ ಗಾಯಕ್ ವಾಡ್ 62 ರನ್ ಸಿಡಿಸಿದರು. ಪಂಜಾಬ್ ಪರ ಅತ್ಯುತ್ತಮ ದಾಳಿ ಸಂಘಟಿಸಿ ಹರ್ಪ್ರೀತ್ ಬ್ರಾರ್ ಮತ್ತು ರಾಹುಲ್ ಚಹರ್ ತಲಾ 2 ವಿಕೆಟ್ ಕಬಳಿಸಿದರು. ಹರ್ಪ್ರೀತ್ ತಮ್ಮ 4 ಓವರ್ ಗಳ ಕೋಟಾದಲ್ಲಿ ಕೇವಲ 16 ರನ್ ನೀಡಿದರೆ ರಾಹುಲ್ 4 ಓವರ್ ಗಳಲ್ಲಿ ಕೇವಲ 17 ರನ್ ನೀಡಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಪಂಜಾಬ್ 17.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಜಾನಿ ಬೇರ್ ಸ್ಟೋ 46, ರಿಲೀ ರೋಸೌ 43 ರನ್ ಗಳಿಸಿದರು. ಕೊನೆಯಲ್ಲಿ ಇನ್ ಫಾರ್ಮ್ ಬ್ಯಾಟಿಂಗ್ ಶಶಾಂಕ್ ಸಿಂಗ್ ಅಜೇಯ 25, ನಾಯಕ ಸ್ಯಾಮ್ ಕ್ಯುರೆನ್ 26 ರನ್ ಗಳಿಸಿದರು.

ಈ ಪಂದ್ಯಕ್ಕೂ ಶಿಖರ್ ಧವನ್ ಗೈರಾಗಿದ್ದರು. ಈ ಸೋಲಿನೊಂದಿಗೆ ಸಿಎಸ್ ಕೆ 10 ಪಂದ್ಯಗಳಿಂದ 5 ಸೋಲಿನೊಂದಿಗೆ 10 ಅಂಕ ಗಳಿಸಿ ನಾಲ್ಕನೇ ಸ್ಥಾನಕ್ಕೆ ಜಾರಿತು. ಈ ನಿರ್ಣಾಯಕ ಘಟ್ಟದಲ್ಲಿ ಈ ಸೋಲು ಚೆನ್ನೈ ತಂಡದ ಮೇಲೆ ಪರಿಣಾಮ ಬೀರಲಿದೆ. ಪಂಜಾಬ್ ಈಗ ಅಂಕಪಟ್ಟಿಯಲ್ಲಿ 7 ನೇ ಸ್ಥಾನಕ್ಕೇರಿತು.

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ಚೇತನ ಅಭಿಮಾನಿಯ ಆಸೆ ಈಡೇರಿಸಿದ ಸೂರ್ಯಕುಮಾರ್ ಯಾದವ್