Select Your Language

Notifications

webdunia
webdunia
webdunia
webdunia

ವಿಶೇಷ ಚೇತನ ಅಭಿಮಾನಿಯ ಆಸೆ ಈಡೇರಿಸಿದ ಸೂರ್ಯಕುಮಾರ್ ಯಾದವ್

Suryakumar Yadav
ಲಕ್ನೋ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಸೂರ್ಯಕುಮಾರ್ ಯಾದವ್ ವಿಶೇಷ ಚೇತನ ಅಭಿಮಾನಿಯ ಆಸೆ ಈಡೇರಿಸಿದ್ದಾರೆ.

ಲಕ್ನೋದಲ್ಲಿ  ಪ್ರಾಕ್ಟೀಸ್ ವೇಳೆ ವೀಲ್ ಚೇರ್ ನಲ್ಲಿ ಕುಳಿತಿದ್ದ ವಿಶೇಷ ಚೇತನ ಅಭಿಮಾನಿಯೊಬ್ಬರು ಸೂರ್ಯಕುಮಾರ್ ಯಾದವ್ ರನ್ನು ತಡೆದು ಸೆಲ್ಫೀಗೆ ಬೇಡಿಕೆಯಟ್ಟಿದ್ದರು. ಆ ಅಭಿಮಾನಿ ಅಸಲಿಗೆ ರೋಹಿತ್ ಶರ್ಮಾ ಅಪ್ಪಟ ಅಭಿಮಾನಿ. ಸೂರ್ಯ ಜೊತೆ ಸೆಲ್ಫೀ ತೆಗೆದುಕೊಂಡ ಅಭಿಮಾನಿ ಒಮ್ಮೆ ತನಗೆ ರೋಹಿತ್ ರನ್ನು ಭೇಟಿ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದ್ದರು.

ತಕ್ಷಣವೇ ರೋಹಿತ್ ರನ್ನು ಕರೆದ ಸೂರ್ಯಕುಮಾರ್ ಯಾದವ್ ಅಭಿಮಾನಿಯ ಬಯಕೆ ಈಡೇರಿಸಿದ್ದಾರೆ. ವಿಶೇಷ ಚೇತನ ಅಭಿಮಾನಿಯ ಕೈಯಲ್ಲಿದ್ದ ಟೀಂ ಇಂಡಿಯಾ ಟೆಸ್ಟ್ ಜೆರ್ಸಿಗೆ ರೋಹಿತ್ ಸಹಿ ಮಾಡಿ ಸೆಲ್ಫೀಗೆ ಪೋಸ್ ಕೊಟ್ಟಿದ್ದಾರೆ. ವಿಶೇಷವೆಂದರೆ ಈ ಜೆರ್ಸಿ ಮೇಲೆ ವಿರಾಟ್ ಕೊಹ್ಲಿ ಹೆಸರಿತ್ತು.

ರೋಹಿತ್ ರನ್ನು ಭೇಟಿಯಾಗುವ ತನ್ನ ಬಯಕೆ ಈಡೇರಿದ್ದಕ್ಕೆ ಅಭಿಮಾನಿಯ ಮುಖದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ಈ ವಿಶೇಷ ಕ್ಷಣದ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಹಲವು ಬಾರಿ ರೋಹಿತ್ ಇದೇ ರೀತಿ ಅಭಿಮಾನಿಗಳ ಮುಖದಲ್ಲಿ ಖುಷಿ ಮೂಡಿಸಿದ್ದು ಇದೆ. ಇದೀಗ ಮತ್ತೊಮ್ಮೆ ವಿಶೇಷ ಚೇತನ ಅಭಿಮಾನಿಯ ಕನಸು ನನಸು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಪ್ಲೇ ಆಫ್ ಹಾದಿ ಸುಗಮಗೊಳಿಸಲು ಸಿಎಸ್ ಕೆಗೆ ಪಂಜಾಬ್ ವಿರುದ್ಧ ಮತ್ತೊಂದು ಚಾನ್ಸ್