Select Your Language

Notifications

webdunia
webdunia
webdunia
webdunia

ಹೋಟೆಲ್ ನಲ್ಲಿ ಬರ್ತ್ ಡೇ ಸೆಲೆಬ್ರೇಷನ್ ವೇಳೆ ಭಾವುಕರಾದ ರೋಹಿತ್ ಶರ್ಮಾ

Rohit Sharma

Krishnaveni K

ಲಕ್ನೋ , ಮಂಗಳವಾರ, 30 ಏಪ್ರಿಲ್ 2024 (09:28 IST)
Photo Courtesy: X
ಲಕ್ನೋ: ಟೀಂ ಇಂಡಿಯಾ ನಾಯಕ, ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಇಂದು ಜನ್ಮದಿನದ ಸಂಭ್ರಮ. ಅವರು ಈ ಬಾರಿಯೂ ತಮ್ಮ ಜನ್ಮದಿನವನ್ನು ಮುಂಬೈ ಇಂಡಿಯನ್ಸ್ ಆಟಗಾರರೊಂದಿಗೆ ಆಚರಿಸಿಕೊಂಡಿದ್ದಾರೆ.

ಪ್ರತೀ ಬಾರಿಯೂ ಐಪಿಎಲ್ ಕೂಟದ ನಡುವೆಯೇ ರೋಹಿತ್ ಶರ್ಮಾ ಬರ್ತ್ ಡೇ ಬರುತ್ತದೆ. ಈ ಬಾರಿಯೂ ಅವರು ತಮ್ಮ 37 ನೇ ಜನ್ಮದಿವನ್ನು ಮುಂಬೈ ತಂಡದ ತಮ್ಮ ನೆಚ್ಚಿನ ಆಟಗಾರರೊಂದಿಗೆ ಕೇಕ್ ಕಟ್ ಮಾಡಿಕೊಂಡು ಆಚರಿಸಿಕೊಂಡಿದ್ದಾರೆ. ಲಕ್ನೋದಲ್ಲಿರುವ ರೋಹಿತ್ ಹೋಟೆಲ್ ನಲ್ಲಿ ಮಧ‍್ಯರಾತ್ರಿ ಕೇಕ್  ಕಟ್ ಮಾಡಿ ಸಂಭ್ರಮಿಸಿದ್ದಾರೆ.

ಈ ಕ್ಷಣದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಜೊತೆಗೆ ಪತ್ನಿ ರಿತಿಕಾ, ಪರಮಾಪ್ತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಅವರ ಪತ್ನಿ ಸೇರಿದಂತೆ ಆಪ್ತರು ಇದ್ದಾರೆ. ವಿಶೇಷವೆಂದರೆ ಕೇಕ್ ಕಟಿಂಗ್ ವೇಳೆ ರೋಹಿತ್ ಭಾವುಕರಾಗಿದ್ದಾರೆ.

ರೋಹಿತ್ ಭಾವುಕರಾಗಿ ಪತ್ನಿಯನ್ನು ತಬ್ಬಿಕೊಂಡು ಕಿಸ್ ಮಾಡುತ್ತಾರೆ. ಎಂದಿನಂತೆ ಈ ಬಾರಿಯೂ ಮುಂಬೈ ಆಟಗಾರರು ರೋಹಿತ್ ಶರ್ಮಾ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸುತ್ತಿದ್ದಾರೆ. ಇಂದು ಮುಂಬೈ ಇಂಡಿಯನ್ಸ್ ಮತ್ತು ಎಲ್ ಎಸ್ ಜಿ ನಡುವೆ ಪಂದ್ಯವೂ ನಡೆಯಲಿದ್ದು, ಈ ಪಂದ್ಯದಲ್ಲಿ ರೋಹಿತ್ ಹುಟ್ಟುಹಬ್ಬ ದಿನವೇ ಶತಕ ಗಳಿಸಲಿ, ಮುಂಬೈ ತಂಡ ಅವರಿಗೆ ಗೆಲುವಿನ ಉಡುಗೊರೆ ನೀಡಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Happy Birthday Rohit Sharma: ರೋಹಿತ್ ಶರ್ಮಾ ತೆಲುಗು ಕನೆಕ್ಷನ್ ಬಗ್ಗೆ ತಿಳಿಯಿರಿ