Select Your Language

Notifications

webdunia
webdunia
webdunia
webdunia

Happy Birthday Rohit Sharma: ರೋಹಿತ್ ಶರ್ಮಾ ತೆಲುಗು ಕನೆಕ್ಷನ್ ಬಗ್ಗೆ ತಿಳಿಯಿರಿ

Rohit Sharma

Krishnaveni K

ಮುಂಬೈ , ಮಂಗಳವಾರ, 30 ಏಪ್ರಿಲ್ 2024 (08:38 IST)
ಮುಂಬೈ: ಟೀಂ ಇಂಡಿಯಾ ನಾಯಕ, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾಗೆ ಇಂದು ಜನ್ಮದಿನದ ಸಂಭ್ರಮ. ರೋಹಿತ್ ಇಂದು 37 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

2007 ರಲ್ಲಿ ಟೀಂ ಇಂಡಿಯಾ ಪ್ರವೇಶಿಸಿದ ರೋಹಿತ್ ಶರ್ಮಾ ಆರಂಭದಲ್ಲಿ ಕೇವಲ ಏಕದಿನ ಮತ್ತು ಟಿ20 ತಂಡದಲ್ಲಿ ಮಾತ್ರ ಸ್ಥಾನ ಪಡೆಯುತ್ತಿದ್ದರು. ಆದರೆ 2013 ರಲ್ಲಿ ಬಹಳ ತಡವಾಗಿ ಅವರಿಗೆ ಟೆಸ್ಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಇದಾದ ಬಳಿಕ ದ್ವಿಶತಕಗಳ ಮೂಲಕ ತಾವೊಬ್ಬ ಟೆಸ್ಟ್ ಪಂದ್ಯಕ್ಕೂ ಲಾಯಕ್ಕಾದ ಆಟಗಾರ ಎಂದು ನಿರೂಪಿಸಿದರು.

ರೋಹಿತ್ ಶರ್ಮಾರನ್ನು ಮುಂಬೈ ಕಾ ರಾಜ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಅವರು ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಮುಂಬೈನಲ್ಲೇ. ಆದರೆ ಅವರಿಗೂ ತೆಲುಗು ಭಾಷೆಗೂ ವಿಶೇಷ ಕನೆಕ್ಷನ್ ಇದೆ. ರೋಹಿತ್ ಹಿಂದಿ ಭಾಷೆಯಂತೆ ತೆಲುಗಿನಲ್ಲೂ ಮಾತನಾಡಬಲ್ಲರು.

ಯಾಕೆಂದರೆ ಅವರ ತಾಯಿ ಪೂರ್ಣಿಮಾ ಶರ್ಮಾ ಮೂಲತಃ ವಿಶಾಖಪಟ್ಟಣದವರು. ಹೀಗಾಗಿ ರೋಹಿತ್ ಎಲ್ಲೇ ಹೋದರೂ ನನ್ನ ಮೂಲ ಆಂಧ್ರ ಎನ್ನುತ್ತಾರೆ. ಇದೇ ಕಾರಣಕ್ಕೆ ದಕ್ಷಿಣ ಭಾರತೀಯ ಶೈಲಿಯ ಊಟವೆಂದರೆ ರೋಹಿತ್ ಗೆ ಇಷ್ಟ. ಎಲ್ಲೇ ಹೋದರೂ ಅನ್ನ ರಸಂ ನನ್ನ ಫೇವರಿಟ್ ಎನ್ನುತ್ತಾರೆ. ತೆಲುಗಿನಲ್ಲಿ ತಕ್ಕಮಟ್ಟಿಗೆ ಮಾತನಾಡಬಲ್ಲರು ಕೂಡಾ. ವಿಶಾಖಪಟ್ಟಣಕ್ಕೆ ಬಂದಾಗಲೆಲ್ಲಾ ಇದು ನನ್ನ ತವರು ಎಂದೇ ಹೇಳುತ್ತಾರೆ. ಅಷ್ಟರಮಟ್ಟಿಗೆ ರೋಹಿತ್ ಈಗಲೂ ತಮ್ಮ ತಾಯಿಯ ತವರಿನೊಂದಿಗೆ ನಂಟು ಬೆಸೆದುಕೊಂಡಿದ್ದಾರೆ.

ಕಳೆದ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಸೋತಾಗ ರೋಹಿತ್ ಜೊತೆಗೆ ಇಡೀ ದೇಶವೇ ಕಣ್ಣೀರು ಹಾಕಿತ್ತು. ಇನ್ನು ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ರೋಹಿತ್ ಗೆ ಮತ್ತೊಂದು ಅವಕಾಶ ಸಿಕ್ಕಿದೆ. ವಿಶ್ವಕಪ್ ಗೆಲ್ಲಿಸಿಕೊಡುವವರೆಗೂ ನಿವೃತ್ತಿಯಾಗಲ್ಲ ಎಂದು ರೋಹಿತ್ ಹೇಳಿದ್ದರು. ಅವರ ವಿಶ್ವಕಪ್ ಗೆಲ್ಲುವ ಕನಸು ಈ ಬಾರಿ ನನಸಾಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್ ಗೆ ಸುಲಭ ಜಯ