ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ಪಂದ್ಯ ಮುಗಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಧೋನಿ ಪತ್ನಿ ಸಾಕ್ಷಿ ಧೋನಿ ಪ್ರಕಟಿಸಿದ ಇನ್ ಸ್ಟಾಗ್ರಾಂ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.
ಹೈದರಾಬಾದ್ ವಿರುದ್ಧ ನಿನ್ನೆಯ ಪಂದ್ಯವನ್ನು ಚೆನ್ನೈ 78 ರನ್ ಗಳಿಂದ ಗೆದ್ದುಕೊಂಡಿತ್ತು. ಪಂದ್ಯದ ನಡುವೆ ಸಾಕ್ಷಿ ಧೋನಿ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ನಿನ್ನೆಯ ಪಂದ್ಯದ ವೇಳೆ ಸಾಕ್ಷಿ ಮೈದಾನದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಸಾಕ್ಷಿ ಮಗು ಜನಿಸಬೇಕಿದೆ. ಬೇಗ ಪಂದ್ಯ ಮುಗಿಸಿ, ಇಂತಿ ಭಾವೀ ಚಿಕ್ಕಮ್ಮ ಎಂದು ಪೋಸ್ಟ್ ಮಾಡಿದ್ದರು. ಅವರ ಈ ಪೋಸ್ಟ್ ಭಾರೀ ವೈರಲ್ ಆಗಿತ್ತು. ಮಗು ಎಂದ ತಕ್ಷಣ ಧೋನಿ ದಂಪತಿ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂದು ಎಲ್ಲರೂ ಅರೆಕ್ಷಣ ಅಂದುಕೊಂಡರು.
ಆದರೆ ಭಾವೀ ಚಿಕ್ಕಮ್ಮ ಎಂದಿದ್ದರಿಂದ ಸಾಕ್ಷಿ ಯಾರ ಬಗ್ಗೆ ಹೇಳಿದರು ಎಂದು ಎಲ್ಲರೂ ಕನ್ ಫ್ಯೂಸ್ ಆಗಿದ್ದಾರೆ. ಬಳಿಕ ಚಿಕ್ಕಮ್ಮನಾಗಲಿರುವುದಾಗಿ ಸಾಕ್ಷಿ ಹೇಳಿಕೊಂಡಿದ್ದರಿಂದ ಧೋನಿಗೆ ಎರಡನೇ ಮಗುವಿನ ವಿಚಾರವಲ್ಲ ಎಂಬುದು ಸ್ಪಷ್ಟವಾಗಿದೆ. ಧೋನಿ ದಂಪತಿಗೆ ಈಗಾಗಲೇ ಓರ್ವ ಪುತ್ರಿಯಿದ್ದಾಳೆ. ಆದರೆ ಇದೀಗ ಎರಡನೇ ಬಾರಿಗೆ ದಂಪತಿ ಗುಡ್ ನ್ಯೂಸ್ ಹೇಳುತ್ತಾರೇನೋ ಎಂದು ಅಭಿಮಾನಿಗಳು ಕಾದಿದ್ದಾರೆ.