Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮತ್ತೆ ಗೆಲ್ಲುವ ತವಕದಲ್ಲಿ ಎಲ್ ಎಸ್ ಜಿ

LSG vs CSK

Krishnaveni K

ಚೆನ್ನೈ , ಮಂಗಳವಾರ, 23 ಏಪ್ರಿಲ್ 2024 (11:36 IST)
ಚೆನ್ನೈ: ಐಪಿಎಲ್ 2024 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಚೆನ್ನೈನೆ ಎಂಎ ಚಿದಂಬರಂ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ನಡುವೆ ಪಂದ್ಯ ನಡೆದಾಗ ಕೆಎಲ್ ರಾಹುಲ್ ಅಬ್ಬರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಈ ಪಂದ್ಯದಲ್ಲಿ ತವರಿನ ಅಂಕಣದ ಲಾಭವೂ ಲಕ್ನೋ ಕೈ ಹಿಡಿದಿತ್ತು. ಕೆಎಲ್ ರಾಹುಲ್ ಸಿಡಿದು ನಿಂತರೆ ಲಕ್ನೋ ಸ್ಟ್ರಾಂಗ್ ಎಂದು ಸಾಬೀತುಪಡಿಸಿದ್ದರು.

ರಾಹುಲ್ ಗೆ ಕ್ವಿಂಟನ್ ಡಿ ಕಾಕ್ ಆರಂಭದಲ್ಲಿ ತಕ್ಕ ಸಾಥ್ ನೀಡುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ ಕ್ವಿಕ್ ಇನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಇವರ ಜೊತೆಗೆ ನಿಕಲಸ್ ಪೂರನ್ ನಂತಹ ಟಿ20 ಸ್ಪೆಷಲಿಸ್ಟ್ ಇದ್ದಾರೆ. ಬೌಲಿಂಗ್ ನಲ್ಲಿ ಮಾರ್ಕಸ್ ಸ್ಟಾಯ್ನಿಸ್, ಮೊಹ್ಸಿನ್ ಖಾನ್, ರವಿ ಬಿಷ್ಠೋಯ್ ರಂತಹ ಪ್ರತಿಭಾವಂತರ ಸಾಥ್ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಪತಿರಾಣ ಮೇಲೆ ಅತಿಯಾಗಿ ಅವಲಂಬಿಸಿತ್ತು. ಆದರೆ ಕಳೆದ ಪಂದ್ಯದಲ್ಲಿ ಪತಿರಾಣ ಕೈಕೊಟ್ಟಿದ್ದರು. ಆದರೆ ಇದೀಗ ಸಿಎಸ್ ಕೆ ಮತ್ತು ಲಕ್ನೋ ಎರಡೂ ತಂಡಗಳೂ 7 ಪಂದ್ಯಗಳಿಂದ 4 ಗೆಲುವು ಪಡೆದಿದ್ದು ಅಂಕಪಟ್ಟಿಯಲ್ಲಿ 4 ಮತ್ತು 5 ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಹಂತದ ದೃಷ್ಟಿಯಿಂದ ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ಈ ಪಂದ್ ಯಸಂಜೆ 7. 30. ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ