Select Your Language

Notifications

webdunia
webdunia
webdunia
webdunia

ಏರ್ ಪೋರ್ಟ್ ನಲ್ಲಿ ಸಪ್ಪೆ ಮುಖಮಾಡಿ ತೆರಳಿದ ವಿರಾಟ್ ಕೊಹ್ಲಿ ವಿಡಿಯೋ ವೈರಲ್

Virat Kohli

Krishnaveni K

ಮುಂಬೈ , ಸೋಮವಾರ, 22 ಏಪ್ರಿಲ್ 2024 (16:51 IST)
ಮುಂಬೈ: ಐಪಿಎಲ್ 2024 ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಕೂಟದಿಂದಲೇ ಹೊರಬಿದ್ದಿದೆ.

ಕೋಲ್ಕೊತ್ತಾದಲ್ಲಿ ನಡೆದಿದ್ದ ಕೆಕೆಆರ್ ವಿರುದ್ಧದ ಪಂದ್ಯವನ್ನು ಆರ್ ಸಿಬಿ ಕೇವಲ 1 ರನ್ ನಿಂದ ಸೋತ ಆರ್ ಸಿಬಿ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿತು. ಈ ಬೇಸರ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸಾಲದೆಂಬಂತೆ ನಿನ್ನೆಯ ಪಂದ್ಯದಲ್ಲಿ ಅವರು ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು.

ಈ ನಿರಾಸೆ ಬಹುಶಃ ಕೊಹ್ಲಿಯನ್ನು ಕೆಲವು ಕಾಲ ಕಾಡಲಿದೆ. ನಿನ್ನೆ ಪಂದ್ಯ ಮುಗಿದ ಬೆನ್ನಲ್ಲೇ ಕೊಹ್ಲಿ ತಮ್ಮ ಮುಂಬೈನ ಮನೆಗೆ ತೆರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ತಡರಾತ್ರಿ ಕೊಹ್ಲಿ ಪಪ್ಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಸಾಮಾನ್ಯವಾಗಿ ಪಪ್ಪಾರಜಿಗಳನ್ನು ಮಾತನಾಡಿಸಿ, ಫೋಟೋಗೆ ಪೋಸ್ ಕೊಡುವ ಕೊಹ್ಲಿ ನಿನ್ನೆ ಮಾತ್ರ ಸಪ್ಪೆ ಮುಖ ಮಾಡಿಕೊಂಡು ತೆರಳಿದ್ದಾರೆ.

ಕೊಹ್ಲಿ ಕೊಹ್ಲಿ ಎಂದು ಎಂದಿನಂತೆ ಕರೆದರೂ ತಿರುಗಿ ನೋಡದೇ ತೆರಳಿದ್ದಾರೆ. ಅವರ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕೂಟಕ್ಕೆ ಮುನ್ನ ಕೊಹ್ಲಿ ಇದು ಆರ್ ಸಿಬಿಯ ಹೊಸ ಅಧ್ಯಾಯ ಎಂದಿದ್ದರು.  ಈ ಬಾರಿ ತಂಡ ಸುಧಾರಿತ ಪ್ರದರ್ಶನ ನೀಡುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಅದೆಲ್ಲವೂ ಹುಸಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಂಡಿಡೇಟ್ಸ್ ಚೆಸ್ ಗೆದ್ದು ದಾಖಲೆ ಮಾಡಿದ ಭಾರತದ ಡಿ ಗುಕೇಶ್