Publish Date: Wed, 24 Apr 2024 (10:13 IST)
Updated Date: Wed, 24 Apr 2024 (10:23 IST)
ಚೆನ್ನೈ: ಐಪಿಎಲ್ 2024 ರಲ್ಲಿ ಯಾಕೋ ದೇವದತ್ತ್ ಪಡಿಕ್ಕಲ್ ಫಾರ್ಮ್ ತೀರಾ ಕಳಪೆಯಾಗಿದೆ. ಬ್ಯಾಟಿಂಗ್ ವೈಫಲ್ಯದಿಂದಾಗಿ ದೇವದತ್ತ್ ಪಡಿಕ್ಕಲ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗೊಳಗಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುವ ದೇವದತ್ತ್ ಪಡಿಕ್ಕಲ್ 3 ರನ್ ಗಳಿಸಲು ಬರೋಬ್ಬರಿ 19 ಎಸೆತ ಎದುರಿಸಿದ್ದಾರೆ. ಇದರಿಂದಾಗಿ ನೆಟ್ಟಿಗರು ಅವರನ್ನು ನಾನಾ ವಿಧದಲ್ಲಿ ಮೆಮೆಗಳ ಮೂಲಕ ಟ್ರೋಲ್ ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಲಕ್ನೋ ಬಾಲ್ ವೇಸ್ಟ್ ಮಾಡುವ ಸ್ಥಿತಿಯಲ್ಲೇ ಇರಲಿಲ್ಲ. ದೇವದತ್ತ್ ಪಡಿಕ್ಕಲ್ ಬಿರುಸಿನ ಇನಿಂಗ್ಸ್ ಆಡಿ ಸ್ಟಾಯ್ನಿಸ್ ಗೆ ಸಾಥ್ ಕೊಡಬೇಕಿತ್ತು. ಆದರೆ ಬಾಲ್ ತಿಂದು ರನ್ ಕೂಡಾ ಗಳಿಸದೇ ತಂಡವನ್ನು ಸಂಕಷ್ಟಕ್ಕೆ ದೂಡಿ ಪೆವಿಲಿಯನ್ ಸೇರಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳ ಆಕ್ರೋಶ ಮೇರೆ ಮೀರಿತ್ತು.
ದೇವದತ್ತ್ ಪಡಿಕ್ಕಲ್ ವಿಕಟ್ ಪಡೆದಿದ್ದಕ್ಕೆ ಧೋನಿ ಬೌಲರ್ ಪತಿರಾಣಗೆ ಬೈದರು ಎಂದು ಕೆಲವರು ತಮಾಷೆ ಮಾಡಿದರೆ ಮತ್ತೆ ಕೆಲವರು ಪಡಿಕ್ಕಲ್ ಐಪಿಎಲ್ ನ ದೊಡ್ಡ ಡಿಸಾಸ್ಟರ್ ಎಂದಿದ್ದಾರೆ. ಆರ್ ಸಿಬಿ ಬಿಟ್ಟ ಮೇಲೆ ದೇವದತ್ತ್ ಪಡಿಕ್ಕಲ್ ಬ್ಯಾಟ್ ಹಿಡಿಯುವುದನ್ನೇ ಮರೆತಿದ್ದಾರೆ ಎಂದು ಟೀಕಿಸಿದ್ದಾರೆ.