Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್ ಗೆ ಸುಲಭ ಜಯ

KKR

Krishnaveni K

ಕೋಲ್ಕೊತ್ತಾ , ಮಂಗಳವಾರ, 30 ಏಪ್ರಿಲ್ 2024 (08:13 IST)
Photo Courtesy: X
ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ 7 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಬ್ಯಾಟಿಂಗ್ ವೈಫಲ್ಯಕ್ಕೆ ಡೆಲ್ಲಿ ತಕ್ಕ ಬೆಲೆ ತೆತ್ತಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಕುಲದೀಪ್ ಯಾದವ್ ಅಜೇಯ 35, ನಾಯಕ ರಿಷಬ್ ಪಂತ್ 27 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟಿಗರ ಸ್ಕೋರ್ 20 ರ ಗಡಿ ದಾಟಲಿಲ್ಲ. ಇದರಿಂದಾಗಿ ಡೆಲ್ಲಿ ಕೇವಲ 153 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆಕೆಆರ್ ಪರ ಅದ್ಭುತ ದಾಳಿ ಸಂಘಟಿಸಿದ ವರುಣ್ ಚಕ್ರವರ್ತಿ 3, ವೈಭವ್ ಅರೋರಾ, ಹರ್ಷಿತ್ ರಾಣಾ ತಲಾ 2 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಕೆಕೆಆರ್ ಕೇವಲ 16.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಗೆಲುವು ಕಂಡಿತು. ಆರಂಭಿಕ ಫಿಲಿಪ್ ಸಾಲ್ಟ್ 68, ಶ್ರೇಯಸ್ ಅಯ್ಯರ್ ಅಜೇಯ 33, ವೆಂಕಟೇಶ‍್ ಅಯ್ಯರ್ ಅಜೇಯ 26 ರನ್ ಗಳಿಸಿದರು. ಡೆಲ್ಲಿ ಪರ ಅಕ್ಸರ್ ಪಟೇಲ್ 2, ಲಿಝಾರ್ಡ್ ವಿಲಿಯಮ್ಸ್ 1 ವಿಕೆಟ್ ಕಬಳಿಸಿದರು.

ಇದು ಸ್ಪಿನ್ ಪಿಚ್ ಆಗಿದ್ದರೂ ಡೆಲ್ಲಿ ಪರ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ವಿಕೆಟ್ ಕಬಳಿಸಲು ವಿಫಲರಾದರು. ಜೊತೆಗೆ ಕನಿಷ್ಠ ಮೊತ್ತವನ್ನು ಡಿಫೆಂಡ್ ಮಾಡುವುದು ಡೆಲ್ಲಿಗೆ ಸುಲಭವಾಗಿರಲಿಲ್ಲ. ಈ ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್ ಹಂತ ಕ್ಷೀಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಬರ್ತಾ ಇದೆ, ಬೇಗ ಪಂದ್ಯ ಮುಗಿಸಿ: ವೈರಲ್ ಆದ ಸಾಕ್ಷಿ ಧೋನಿ ಪೋಸ್ಟ್