Select Your Language

Notifications

webdunia
webdunia
webdunia
webdunia

ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್ ಪಡೆಗೆ ಇಂದು ಮುಂಬೈ ವಿರುದ್ಧ ಮಹತ್ವದ ಪಂದ್ಯ

LSG

Krishnaveni K

ಲಕ್ನೋ , ಮಂಗಳವಾರ, 30 ಏಪ್ರಿಲ್ 2024 (11:01 IST)
ಲಕ್ನೋ: ಐಪಿಎಲ್ 2024 ರಲ್ಲಿ ಇಂದು ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಮಹತ್ವದ ಪಂದ್ಯವಾಡಲಿದೆ.

ಕಳೆದ ಪಂದ್ಯವನ್ನು ಸೋತಿದ್ದ ಲಕ್ನೋ ಸೂಪರ್ ಜೈಂಟ್ಸ್ ಇಂದು ತವರಿನ ನೆಲದಲ್ಲಿ ನಡೆಯಲಿರುವ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸದ್ಯಕ್ಕೆ 9 ಪಂದ್ಯಗಳಿಂದ 5 ಗೆಲುವು ಕಂಡಿರುವ ಲಕ್ನೋ 10 ಅಂಕ ಸಂಪಾದಿಸಿದೆ. ಪ್ಲೇ ಆಫ್ ಹಾದಿಗೇರುವ ನಿಟ್ಟಿನಲ್ಲಿ ಲಕ್ನೋಗೆ ಈಗ ಜಯ ಅನಿವಾರ್ಯವಾಗಿದೆ.

ಸತತ ಎರಡು ಗೆಲುವುಗಳ ಹೊರತಾಗಿಯೂ ಕಳೆದ ಪಂದ್ಯದಲ್ಲಿ ರಾಹುಲ್ ಪಡೆ ಪ್ರಬಲ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿತ್ತು. ಇದರ ಹೊರತಾಗಿ ಲಕ್ನೋ ಈಗ ಫಾರ್ಮ್ ನಲ್ಲಿದೆ. ಕೆಎಲ್ ರಾಹುಲ್, ಮಾರ್ಕಸ್ ಸ್ಟಾಯ್ನಿಸ್, ನಿಕಲಸ್ ಪೂರನ್ ಸೇರಿದಂತೆ ಬ್ಯಾಟಿಗರು ಫಾರ್ಮ್ ನಲ್ಲಿದ್ದಾರೆ. ಬೌಲಿಂಗ್ ನಲ್ಲಿ ಯಶ್ ಠಾಕೂರ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್ ಅವರಂತಹ ಪ್ರತಿಭೆಗಳಿದ್ದಾರೆ.

ಇನ್ನು, ಮುಂಬೈ ಇಂಡಿಯನ್ಸ್ ಗೆ ಈ ಟೂರ್ನಿ ಒಂದು ಕೆಟ್ಟ ಕನಸೆಂದೇ ಹೇಳಬಹುದು. ಇದುವರೆಗೆ ಆಡಿದ 9 ಪಂದ್ಯಗಳಿಂದ ಮುಂಬೈಗೆ ದಕ್ಕಿದ್ದು 3 ಗೆಲುವು ಮಾತ್ರ. ಆದರೆ ಇಂದೂ ಸೋತರೆ ಮತ್ತೊಮ್ಮೆ ಹ್ಯಾಟ್ರಿಕ್ ಸೋಲು ಕಂಡಂತಾಗಲಿದೆ. ಆ ಅವಮಾನ ತಪ್ಪಿಸಲು ಇಂದು ಗೆಲುವಿಗಾಗಿ ಮುಂಬೈ ಪ್ರಯತ್ನ ಪಡಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ನಲ್ಲಿ ಬರ್ತ್ ಡೇ ಸೆಲೆಬ್ರೇಷನ್ ವೇಳೆ ಭಾವುಕರಾದ ರೋಹಿತ್ ಶರ್ಮಾ