Select Your Language

Notifications

webdunia
webdunia
webdunia
webdunia

ಮಹಿಳಾ ವಿಶ್ವಕಪ್: ಭಾರತ ವನಿತೆಯರ ಸೆಮಿಫೈನಲ್ ಕನಸಿಗೆ ಇನ್ನೊಂದೇ ಮೆಟ್ಟಿಲು

ಮಹಿಳಾ ಏಕದಿನ ವಿಶ್ವಕಪ್
ಹ್ಯಾಮಿಲ್ಟನ್ , ಮಂಗಳವಾರ, 22 ಮಾರ್ಚ್ 2022 (17:06 IST)
ಹ್ಯಾಮಿಲ್ಟನ್: ಬಾಂಗ್ಲಾದೇಶ ವಿರುದ್ಧ ಇಂದು ನಡೆದ ಮಹಿಳಾ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಮಹತ್ವದ ಗೆಲುವು ಸಂಪಾದಿಸಿದ ಭಾರತ ತಂಡ ಸೆಮಿಫೈನಲ್ ಕನಸು ಜೀವಂತವಾಗಿರಿಸಿದೆ.

ಇಂದಿನ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು 110 ರನ್ ಗಳ ಭರ್ಜರಿ ಅಂತರದಿಂದ ಸೋಲಿಸಿದ ಭಾರತ ಇದೀಗ ಅಂಕಪಟ್ಟಿಯಲ್ಲಿ 3 ನೇ ಸ್ಥಾನಕ್ಕೇರಿದೆ. ಮುಂದಿನ ಪಂದ್ಯದಲ್ಲಿ ಸಾಮಾನ್ಯ ಗೆಲುವು ಕಂಡರೂ ಭಾರತಕ್ಕೀಗ ಸೆಮಿಫೈನಲ್ ಗೆ ಪ್ರವೇಶಿಸಬಹುದಾಗಿದೆ.

ಇಂದಿನ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 229 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾ 119 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಸ್ನೇಹ ರಾಣಾ 4, ಜೂಲಾನ್ ಗೋಸ್ವಾಮಿ, ಪೂಜಾವಸ್ತ್ರಾಕರ್ ತಲಾ 2 ವಿಕೆಟ್, ರಾಜೇಶ್ವರಿ ಗಾಯಕ್ ವಾಡ್ ಮತ್ತು ಪೂನಂ ಯಾದವ್ ತಲಾ 1 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ವಿಶ್ವಕಪ್: ಬಾಂಗ್ಲಾ ವಿರುದ್ಧ ಮಿಂಚಿದ ಯಸ್ತಿಕಾ ಭಾಟಿಯಾ, ಶಫಾಲಿ ವರ್ಮ