Select Your Language

Notifications

webdunia
webdunia
webdunia
webdunia

ಮಹಿಳಾ ವಿಶ್ವಕಪ್: ಬಾಂಗ್ಲಾ ವಿರುದ್ಧ ಮಿಂಚಿದ ಯಸ್ತಿಕಾ ಭಾಟಿಯಾ, ಶಫಾಲಿ ವರ್ಮ

ಮಹಿಳಾ ವಿಶ್ವಕಪ್: ಬಾಂಗ್ಲಾ ವಿರುದ್ಧ ಮಿಂಚಿದ ಯಸ್ತಿಕಾ ಭಾಟಿಯಾ, ಶಫಾಲಿ ವರ್ಮ
ಹ್ಯಾಮಿಲ್ಟನ್ , ಮಂಗಳವಾರ, 22 ಮಾರ್ಚ್ 2022 (09:40 IST)
ಹ್ಯಾಮಿಲ್ಟನ್: ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಮಹತ್ವದ ಪಂದ್ಯವಾಡುತ್ತಿರುವ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿದ 50 ಓವರ್ ಗಳಲ್ಲಿ 7  ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದೆ.

ಭಾರತದ ಆರಂಭ ಉತ್ತಮವಾಗಿಯೇ ಇತ್ತು. ಸ್ಮೃತಿ ಮಂಥನಾ 30, ಶಫಾಲಿ ವರ್ಮ 42 ರನ್ ಗಳಿಸಿ ಮಿಂಚಿದರು. ಬಳಿಕ ಯಸ್ತಿಕಾ ಭಾಟಿಯಾ 50 ರನ್ ಗಳಿಸಿ ಮಿಂಚಿದರು. ಆದರೆ ನಾಯಕಿ ಮಿಥಾಲಿ ರಾಜ್  ಶೂನ್ಯಕ್ಕೆ ನಿರ್ಗಮಿಸಿದರೆ, ಹರ್ಮನ್ ಪ್ರೀತ್ ಕೌರ್ 14 ರನ್ ಗೇ ವಿಕೆಟ್ ಒಪ್ಪಿಸಿದರು.

ಕೆಳ ಕ್ರಮಾಂಕದಲ್ಲಿ ಪೂಜಾ ವಸ್ತ್ರಾಕರ್ ಅಜೇಯ 30 ರನ್ ಗಳಿಸಿದರು. ಅಂತಿಮವಾಗಿ ಭಾರತ, ಬಾಂಗ್ಲಾಗೆ 230 ರನ್ ಗಳ ಗುರಿ ನಿಗದಿಪಡಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ಬಂದ ಕಿಂಗ್ ಕೊಹ್ಲಿ: ಫ್ಯಾನ್ಸ್ ಖುಷ್