Select Your Language

Notifications

webdunia
webdunia
webdunia
webdunia

ಚೆನ್ನೈ ಸೂಪರ್ ಕಿಂಗ್ಸ್ ಗೆ ಬರಲು ಸ್ಟಾರ್ ಆಟಗಾರನಿಗೆ ವೀಸಾ ಸಮಸ್ಯೆ!

ಚೆನ್ನೈ ಸೂಪರ್ ಕಿಂಗ್ಸ್ ಗೆ ಬರಲು ಸ್ಟಾರ್ ಆಟಗಾರನಿಗೆ ವೀಸಾ ಸಮಸ್ಯೆ!
ಮುಂಬೈ , ಸೋಮವಾರ, 21 ಮಾರ್ಚ್ 2022 (08:50 IST)
ಮುಂಬೈ: ಐಪಿಎಲ್ ಆರಂಭವಾಗಲು ಕೆಲವೇ ದಿನ ಬಾಕಿಯಿಳಿದಿದ್ದು, ಮೊದಲ ಪಂದ್ಯದಲ್ಲೇ ಸಿಎಸ್ ಕೆ, ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಈ ಪಂದ್ಯಕ್ಕೆ ಮೊದಲು ಸಿಎಸ್ ಕೆ ಹೊಸ ತಲೆನೋವು ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಮೊಯಿನ್ ಅಲಿಗೆ ಭಾರತಕ್ಕೆ ಬರಲು ಇನ್ನೂ ವೀಸಾ ಸಿಕ್ಕಿಲ್ಲ. ಇದರಿಂದಾಗಿ ಅವರು ಆರಂಭಿಕ ಪಂದ್ಯಕ್ಕೆ ಗೈರಾಗುವ ಸಾಧ್ಯತೆಯಿದೆ.

ಚೆನ್ನೈ ತಂಡ ಕಳೆದ ಬಾರಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಟಗಾರರಲ್ಲಿ ಇಂಗ್ಲೆಂಡ್ ಮೂಲದ ಮೊಯಿನ್ ಅಲಿ ಕೂಡಾ ಒಬ್ಬರು. ಆದರೆ ಈ ಬಾರಿ ಸತತ 20 ದಿನದಿಂದ ಪ್ರಯತ್ನಿಸಿದರೂ ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಅವರಿಗೆ ಇನ್ನೂ ವೀಸಾ ಸಿಕ್ಕಿಲ್ಲ. ಇದು ಸಿಎಸ್ ಕೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹಾಯ ಮಾಡುವುದರಲ್ಲಿ ರೋಹಿತ್ ಶರ್ಮಾರದ್ದು ಎತ್ತಿದ ಕೈ: ಶಿಖರ್ ಧವನ್ ಹೊಗಳಿಕೆ