ಮುಂಬೈ: ಆರ್ ಸಿಬಿ ತಂಡದಿಂದ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಬಿಕರಿಯಾಗಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮಾಡಿದ ತಮಾಷೆಯೊಂದು ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ತಂದಿತ್ತು.
ಕೆಲವು ಕಾಲ ರಾಜಸ್ಥಾನ್ ರಾಯಲ್ಸ್ ತಂಡದ ಟ್ವಿಟರ್ ಖಾತೆ ಪಾಸ್ ವರ್ಡ್ ಪಡೆದು ಖಾತೆ ಹ್ಯಾಂಡಲ್ ಮಾಡಿ ಚಾಹಲ್, ರಾಜಸ್ಥಾನ್ ತಂಡಕ್ಕೆ ತಾನೇ ನಾಯಕ ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟರು. ಬಳಿಕ ಈ ಬಾರಿ ಜೋಸ್ ಬಟ್ಲರ್ ಜೊತೆ ತಾನು ಇನಿಂಗ್ಸ್ ಆರಂಭಿಸುವುದಾಗಿ ಇನ್ನೊಂದು ಶಾಕ್ ಕೊಟ್ಟರು.
ರಾಜಸ್ಥಾನ್ ತಂಡದಲ್ಲಿ ಏನಾಗುತ್ತಿದೆ ಎಂದು ದಂಗಾಗಿದ್ದ ಅಭಿಮಾನಿಗಳಿಗೆ ಬಳಿಕ ಚಾಹಲ್ ಅವರೇ ಸ್ಪಷ್ಟನೆ ಕೊಟ್ಟಾಗ ಎಲ್ಲರೂ ನಗೆಗಡಲಲ್ಲಿ ತೇಲುವಂತಾಗಿತ್ತು. ಕೆಲವು ಕ್ಷಣಗಳ ಕಾಲ ಟ್ವಿಟರ್ ಖಾತೆಯನ್ನು ತಾವೇ ಹ್ಯಾಂಡಲ್ ಮಾಡಿದ್ದ ಚಾಹಲ್ ತಮಾಷೆಗಾಗಿ ಇಂತಹ ಟ್ವೀಟ್ ಮಾಡಿ ಬೇಸ್ತು ಬೀಳಿಸಿದ್ದರು. ರಾಜಸ್ಥಾನ್ ತಂಡವನ್ನು ಸಂಜು ಸ್ಯಾಮ್ಸನ್ ಅವರೇ ಮುನ್ನಡೆಸುತ್ತಿದ್ದಾರೆ.