Publish Date: Sat, 12 Mar 2022 (09:05 IST)
Updated Date: Sat, 12 Mar 2022 (09:29 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಬಾರಿ ಹೊಸ ನಾಯಕನ ಆಗಮನವಾಗಲಿದೆ. ಹೊಸ ನಾಯಕ ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.
ಕೊಹ್ಲಿಯಿಂದ ತೆರವಾದ ಸ್ಥಾನಕ್ಕೆ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಫಾ ಡು ಪ್ಲೆಸಿಸ್ ನಡುವೆ ತೀವ್ರ ಪೈಪೋಟಿಯಿದೆ. ಮೊಹಮ್ಮದ್ ಸಿರಾಜ್ ಕೂಡಾ ರೇಸ್ ನಲ್ಲಿದ್ದಾರೆ.
ನಾಯಕನ ಜೊತೆಗೆ ಹೊಸ ಮೆಂಟರ್ ಆಗಿ ಎಬಿಡಿ ವಿಲಿಯರ್ಸ್ ಆಯ್ಕೆಯನ್ನೂ ಇಂದು ಆರ್ ಸಿಬಿ ಅಧಿಕೃತವಾಗಿ ಘೋಸಿಸುವ ಸಾಧ್ಯತೆಯಿದೆ. ಈ ಮೂಲಕ ಕಳೆದ ಋತುವಿನವರೆಗೆ ಆಟಗಾರನಾಗಿ ತಂಡದ ಭಾಗವಾಗಿದ್ದ ಎಬಿಡಿ ಈ ಬಾರಿ ಸಲಹೆಗಾರನಾಗಿ ತಂಡದ ಜೊತಗಿರಲಿದ್ದಾರೆ.