Publish Date: Fri, 11 Mar 2022 (11:23 IST)
Updated Date: Fri, 11 Mar 2022 (11:26 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಳೆ ಹೊಸ ನಾಯಕನ ಘೋಷಣೆಯಾಗಲಿದೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕುತೂಹಲ ಮೂಡಿಸುವ ಸಂದೇಶವೊಂದನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶ ನೀಡಿರುವ ಕೊಹ್ಲಿ ಹೊಸ ಐಪಿಎಲ್ ಸೀಸನ್ ಆಡಲು ಉತ್ಸುಕನಾಗಿದ್ದೇನೆ. ನಿಮಗೆ ಒಂದು ಮುಖ್ಯವಾದ ಸುದ್ದಿಯಿದೆ ಎಂದಿರುವುದು ಅಭಿಮಾನಿಗಳನ್ನು ಕುತೂಹಲದಲ್ಲಿ ಕೆಡವಿದೆ.
ನಾಳೆ ಆರ್ ಸಿಬಿಗೆ ಹೊಸ ನಾಯಕನ ಘೋಷಣೆಯಾಗಲಿದೆ. ಆದರೆ ಕೊಹ್ಲಿ ಮತ್ತೆ ನಾಯಕನಾಗುವ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಹಾಗಿದ್ದರೂ ಅವರ ಈ ಒಂದು ಸಂದೇಶ ಅಭಿಮಾನಿಗಳಲ್ಲಿ ಭರವಸೆ ಚಿಗುರಿಸಿದೆ.