Publish Date: Fri, 27 Aug 2021 (08:45 IST)
Updated Date: Fri, 27 Aug 2021 (08:59 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ ಬರೋಬ್ಬರಿ 345 ರನ್ ಗಳ ಮುನ್ನಡೆ ಸಾಧಿಸಿದೆ.
ಭಾರತ ಕೇವಲ 78 ರನ್ ಗಳಿಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ ಎರಡನೇ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 423 ರನ್ ಗಳಿಸಿದೆ. ಇದರೊಂದಿಗೆ ಭರ್ಜರಿ ಮುನ್ನಡೆ ಗಳಿಸಿದೆ.
ಇಂಗ್ಲೆಂಡ್ ಪರ ಮತ್ತೆ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ಜೋ ರೂಟ್ ಮತ್ತೊಂದು ಶತಕ ಗಳಿಸಿದರು. 121 ರನ್ ಗಳಿಸಿದ ಅವರು ಬುಮ್ರಾ ಎಸೆತದಲ್ಲಿ ಬೌಲ್ಡ್ ಔಟ್ ಆದರು. ಡೇವಿಡ್ ಮಲನ್ 70 ರನ್ ಗಳಿಸಿದರು. ಇದೀಗ 24 ರನ್ ಗಳಿಸಿರುವ ಓವರ್ಟನ್ ಮತ್ತು ಒಲಿ ರಾಬಿನ್ಸನ್ ಖಾತೆ ತೆರೆಯದೇ ಕ್ರೀಸ್ ನಲ್ಲಿದ್ದಾರೆ. ಭಾರತದ ಪರ ಮೊಹಮ್ಮದ್ ಶಮಿ 3, ಜಸ್ಪ್ರೀತ್ ಬುಮ್ರಾ 1, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಬಳಿಸಿದ್ದಾರೆ.