Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಜೋ ರೂಟ್ ಶತಕ: ಇಂಗ್ಲೆಂಡ್ ಗೆ 345 ರನ್ ಗಳ ಭಾರೀ ಮುನ್ನಡೆ

webdunia
ಗುರುವಾರ, 26 ಆಗಸ್ಟ್ 2021 (23:15 IST)

ನಾಯಕ ಜೋ ರೂಟ್ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ 345 ರನ್ ಗಳ ಭಾರೀ ಮುನ್ನಡೆ ಪಡೆದಿದೆ.

ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೇ 120 ರನ್ ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ದಿನದಾಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 423 ರನ್ ಗಳಿಸಿದೆ.

ರೂಟ್ 165 ಎಸೆತಗಳಲ್ಲಿ 14 ಬೌಂಡರಿ ಸೇರಿದ 121 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ರೋರಿ ಬರ್ನ್ಸ್ (61), ಹಸೀಬ್ ಹಮೀದ್ (68), ಡೇವಿಡ್ ಮಲಾನ್ (70) ಅರ್ಧಶತಕಗಳನ್ನು ಬಾರಿಸಿ ತಂಡದ ಮೊತ್ತ ಉಬ್ಬಿಸಿದರು.

ಭಾರತದ ಪರ ಮೊಹಮದ್ ಶಮಿ 3, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್ ತಲಾ 2 ವಿಕೆಟ್ ಗಳಿಸಿದರು,


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ರೂಟ್, ಮಲಾನ್ ಅರ್ಧಶತಕ: ಭಾರೀ ಮುನ್ನಡೆಯತ್ತ ಇಂಗ್ಲೆಂಡ್