Publish Date: Thu, 26 Aug 2021 (09:38 IST)
Updated Date: Thu, 26 Aug 2021 (10:04 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲೂ ಇಂಗ್ಲೆಂಡ್ ಪ್ರೇಕ್ಷಕರ ದುರ್ವರ್ತನೆ ಮುಂದುವರಿದಿದೆ.
ಕಳೆದ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಮೇಲೆ ಪ್ರೇಕ್ಷಕರು ಬಾಟಲಿ ಕಾರ್ಕ್ ಎಸೆದಿದ್ದ ಪ್ರೇಕ್ಷಕರು ಮೂರನೇ ಟೆಸ್ಟ್ ನಲ್ಲೂ ಅದೇ ಕೆಟ್ಟ ನಡತೆ ತೋರಿದ್ದಾರೆ. ನಿನ್ನೆ ಮೊದಲ ದಿನದಾಟದಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಮೊಹಮ್ಮದ್ ಸಿರಾಜ್ ಮೇಲೆ ಇಂಗ್ಲೆಂಡ್ ಪ್ರೇಕ್ಷಕರು ಬಾಲ್ ಎಸೆದಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಕೊಹ್ಲಿ ತಿರುಗಿಸಿ ಎಸೆಯುವಂತೆ ಸಿರಾಜ್ ಗೆ ಸೂಚಿಸಿದ್ದಾರೆ. ಅತ್ತ ಸಿರಾಜ್ ಬಾಲ್ ಎಸೆದು ನಾವು ಸರಣಿಯಲ್ಲಿ 1-0 ರಿಂದ ಮುಂದಿದ್ದೇವೆ ಎಂದು ಸನ್ನೆ ಮಾಡಿದ್ದಾರೆ.