Publish Date: Thu, 26 Aug 2021 (16:53 IST)
Updated Date: Thu, 26 Aug 2021 (16:55 IST)
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದು, ಇತ್ತೀಚೆಗಿನ ವರದಿ ಬಂದಾಗ ಕೇವಲ 1 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.
68 ರನ್ ಗಳಿಸಿರುವ ಹಸೀಬ್ ಅಹಮ್ಮದ್ ಮತ್ತು 12 ರನ್ ಗಳಿಸಿರುವ ಡೇವಿಡ್ ಮಲನ್ ಬ್ಯಾಟಿಂಗ್ ನಡೆಸುತ್ತಿದ್ದಾರೆ. 61 ರನ್ ಗಳಿಸಿದ ರಾಯ್ ಬರ್ನ್ಸ್ ವಿಕೆಟ್ ಮೊಹಮ್ಮದ್ ಶಮಿ ಪಾಲಾಗಿದೆ.
ಇದೀಗ ಇಂಗ್ಲೆಂಡ್ ಮುನ್ನಡೆ 71 ರನ್ ಗೇರಿಕೆಯಾಗಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ ಕೇವಲ 78 ರನ್ ಗಳಿಗೆ ಆಲೌಟ್ ಆಗಿತ್ತು.