Select Your Language

Notifications

webdunia
webdunia
webdunia
webdunia

IND vs NZ: ರನ್ ಲೀಕಿಂಗ್ ಮೆಷಿನ್ ಗಳಾದ ಟೀಂ ಇಂಡಿಯಾ ಬೌಲರ್ ಗಳು, ನ್ಯೂಜಿಲೆಂಡ್ ಬೃಹತ್ ಮೊತ್ತ

Harshit Rana
ವಿಶಾಖಪಟ್ಟಣಂ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು ರನ್ ಲೀಕಿಂಗ್ ಮೆಷಿನ್ ಗಳಾದರೆ ನ್ಯೂಜಿಲೆಂಡ್ ಬೃಹತ್ ಮೊತ್ತ ಪೇರಿಸಿದೆ.

ಇಂದು ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ನ್ಯೂಜಿಲೆಂಡ್ ಗೆ ಬ್ಯಾಟಿಂಗ್ ಅವಕಾಶ ನೀಡಿತು. ಕಿವೀಸ್ ಗೆ ಡೆವನ್ ಕಾನ್ವೇ (44), ಟಿಮ್ ಸೀಫರ್ಟ್ (62) ಅಬ್ಬರದ ಆರಂಭ ನೀಡಿದರು. ಈ ಜೋಡಿ 8 ಓವರ್ ಗಳಲ್ಲೇ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದ್ದರು.

ಇವರ ವಿಕೆಟ್ ಉರುಳಿದ ನಂತರವೂ ನ್ಯೂಜಿಲೆಂಡ್ ಅಬ್ಬರ ನಿಲ್ಲಲಿಲ್ಲ. ಡೆರಿಲ್ ಮಿಚೆಲ್ 18 ಎಸೆತಗಳಿಂದ 39 ರನ್ ಚಚ್ಚಿದರೆ ಗ್ಲೆನ್ ಫಿಲಿಪ್ಸ್ 24 ರನ್ ಗಳ ಕೊಡುಗೆ ನೀಡಿದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು.

ಭಾರತೀಯ ಬೌಲರ್ ಗಳು ಎಲ್ಲರೂ ಇಂದು ಅಕ್ಷರಶಃ ರನ್ ಲೀಕಿಂಗ್ ಮೆಷಿನ್ ಗಳಾದರು. ಹರ್ಷಿತ್ ರಾಣಾ 4 ಓವರ್ ಗಳಲ್ಲಿ 54 ರನ್ ನೀಡಿದರೆ ರವಿ ಬಿಷ್ಣೋಯ್ 49 ರನ್ ನೀಡಿದರು. ಕುಲದೀಪ್ ಯಾದವ್ 4 ಓವರ್ ಗಳಲ್ಲಿ 39 ರನ್ ನೀಡಿದರೂ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಬುಮ್ರಾ 4 ಓವರ್ ಗಳಲ್ಲಿ 38 ರನ್ ನೀಡಿ 1 ವಿಕೆಟ್ ತಮ್ಮದಾಗಿಸಿಕೊಂಡರು. ಇದ್ದವರಲ್ಲಿ ಅರ್ಷ್ ದೀಪ್ ಸಿಂಗ್ ಅವರೇ ವಾಸಿ. 4 ಓವರ್ ಗಳಲ್ಲಿ 33 ರನ್ ನೀಡಿದ ಅವರು 2 ವಿಕೆಟ್ ಕಬಳಿಸಿದರು. ಇದೀಗ ಭಾರತ ಗೆಲ್ಲಲು 216 ರನ್ ಗಳಿಸಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾ ಡ್ರೈವರಾ... ಶ್ರೇಯಾಂಕ ಪಾಟೀಲ್ ಡ್ಯಾನ್ಸ್: ಸ್ಮೃತಿ ಮಂಧಾನ ರಿಯಾಕ್ಷನ್ ಮಾತ್ರ ಮಿಸ್ ಮಾಡ್ಲೇಬೇಡಿ video