Publish Date: Mon, 20 Jul 2026 (10:11 IST)
Updated Date: Mon, 20 Jul 2026 (10:16 IST)
ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ ರೋಹಿತ್ ಶರ್ಮಾ ಔಟಾಗಿ ಮರಳುತ್ತಿದ್ದಾಗ ಜೊತೆಯಲ್ಲಿದ್ದ ವಿರಾಟ್ ಕೊಹ್ಲಿ ಏನು ಮಾಡಿದ್ರು ಗೊತ್ತಾ? ಈ ವಿಡಿಯೋ ಇಲ್ಲಿದೆ ನೋಡಿ.
ರೋಹಿತ್ ಶರ್ಮಾ ವೃತ್ತಿ ಜೀವನ ಮುಗಿಯಿತು, ಲಾರ್ಡ್ಸ್ ಪಂದ್ಯದ ನಂತರ ಅವರು ನಿವೃತ್ತಿಯಾಗುತ್ತಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ಕೇವಲ 110 ಎಸೆತಗಳಿಂದ 17 ಬೌಂಡರಿ, 5 ಸಿಕ್ಸರ್ ಸಹಿತಿ 138 ರನ್ ಚಚ್ಚಿ ರೋಹಿತ್ ತಮ್ಮ ಹಿಟ್ ಮ್ಯಾನ್ ಅವತಾರ ಪ್ರದರ್ಶಿಸಿದ್ದರು.
ಈ ಇನಿಂಗ್ಸ್ ಅನೇಕ ಟೀಕೆಗಳಿಗೆ ಉತ್ತರ ನೀಡಿದಂತಾಗಿದೆ. ನಿನ್ನೆಯ ಅವರ ಇನಿಂಗ್ಸ್ ಕೊನೆಯಾಗುತ್ತಿದ್ದಂತೇ ಇಡೀ ಸ್ಟೇಡಿಯಂ ಎದ್ದು ನಿಂತು ಚಪ್ಪಾಳೆ ತಟ್ಟಿ ರೋಹಿತ್ ಗೆ ಗೌರವ ಸಲ್ಲಿಸಿದೆ. ಇನ್ನು ವಿರಾಟ್ ಕೊಹ್ಲಿ ಕೂಡಾ ವಿಶೇಷವಾಗಿ ಅಭಿನಂದಿಸಿದ್ದಾರೆ.
ನಿನ್ನೆ ಶತಕ ಸಿಡಿಸುವಾಗ ರೋಹಿತ್ ಜೊತೆಗೆ ಇನ್ನೊಂದು ತುದಿಯಲ್ಲಿದ್ದಿದ್ದು ವಿರಾಟ್ ಕೊಹ್ಲಿ. ಕೊನೆಗೆ ಔಟಾಗಿ ಹೋಗುವಾಗಲೂ ರೋಹಿತ್ ರಷ್ಟೇ ಕೊಹ್ಲಿ ಕೂಡಾ ನಿರಾಶರಾಗಿದ್ದರು. ಆದರೆ ತಮ್ಮ ಗೆಳೆಯನ ಅದ್ಭುತ ಇನಿಂಗ್ಸ್ ನಿಂದ ಖುಷಿಯಾದ ಕೊಹ್ಲಿ ಪೆವಿಲಿಯನ್ ಕಡೆಗೆ ಸಾಗುತ್ತಿದ್ದ ರೋಹಿತ್ ತಲೆ ದಡವಿದ್ದಲ್ಲದೆ, ಚಪ್ಪಾಳೆ ತಟ್ಟುತ್ತಾ ನಿಂತಿದ್ದರು. ಅವರ ಈ ಗೆಳೆತನ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದೆ.
ನಿನ್ನೆಯ ಪಂದ್ಯವನ್ನು ಟೀಂ ಇಂಡಿಯಾ 27 ರನ್ ಗಳಿಂದ ಸೋತು ಸರಣಿ ಕಳೆದುಕೊಂಡಿದೆ. ಆದರೂ ರೋಹಿತ್-ಕೊಹ್ಲಿ ಆಟ ಅಭಿಮಾನಿಗಳ ಮನಸ್ಸು ಗೆದ್ದಿದೆ. ಕೊಹ್ಲಿ ಕೂಡಾ ನಿನ್ನೆ ಅರ್ಧಶತಕ ಸಿಡಿಸಿದ್ದು 74 ರನ್ ಗಳಿಸಿ ಔಟಾದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ