Publish Date: Wed, 15 Jul 2026 (11:01 IST)
Updated Date: Wed, 15 Jul 2026 (11:04 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಕಾಮೆಂಟರಿ ಮಾಡಲು ಬಂದಿದ್ದ ದಿನೇಶ್ ಕಾರ್ತಿಕ್ ಗೆ ರೋಹಿತ್ ಶರ್ಮಾ ಮೈದಾನದಲ್ಲೇ ಕಿಕ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.
ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ನಡುವಿನ ಗೆಳೆತನ ತುಂಬಾ ಸಮಯದಿಂದಲೂ ಹೀಗೇ ಇದೆ. ಇಬ್ಬರೂ ಎಲ್ಲೇ ಸಿಕ್ಕರೂ ಪರಸ್ಪರ ಕಾಲೆಳೆದುಕೊಳ್ಳುತ್ತಿರುತ್ತಾರೆ. ನಿನ್ನೆಯೂ ಇದೇ ರೀತಿ ಆಗಿದೆ.
ನಿನ್ನೆಯ ಪಂದ್ಯಕ್ಕೆ ಮೊದಲು ಮೈದಾನಕ್ಕೆ ಕೊಹ್ಲಿ ಜೊತೆ ಬಂದ ರೋಹಿತ್ ಗೆ ಅಲ್ಲೇ ಇದ್ದ ದಿನೇಶ್ ಕಾರ್ತಿಕ್ ಪ್ರೀತಿಯಿಂದ ಕೈಕುಲುಕಲು ಬಂದಿದ್ದಾರೆ. ಈ ವೇಳೆ ಕೈಕುಲುಕಿದ ರೋಹಿತ್ ಮರು ಕ್ಷಣವೇ ಕಾಲಿನಿಂದ ಹೊಟ್ಟೆಗೆ ಕಿಕ್ ಮಾಡಿ ತಮಾಷೆ ಮಾಡಿದ್ದಾರೆ.
ರೋಹಿತ್ ಎಲ್ಲಿದ್ದರೂ ರೋಹಿತ್ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ತಮ್ಮ ಗೆಳೆಯರನ್ನು ಸದಾ ನಗಿಸುತ್ತಾ, ಬೈಗುಳ ನೀಡುತ್ತಾ ರೋಹಿತ್ ನೆರೆದವರಿಗೆ ಮನರಂಜನೆ ನೀಡುತ್ತಾರೆ. ಈ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ