Publish Date: Tue, 14 Jul 2026 (20:39 IST)
Updated Date: Tue, 14 Jul 2026 (20:42 IST)
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಕನ್ನಡಿಗ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಕನ್ನಡದಲ್ಲೇ ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ.
ಇಬ್ಬರೂ ತಂಡದಲ್ಲಿದ್ದಾಗ ಪರಸ್ಪರ ಸಲಹೆ ಕೊಡಬೇಕಾದರೆ ಕನ್ನಡದಲ್ಲೇ ಮಾತನಾಡುತ್ತಾರೆ. ಇದು ಅನೇಕ ಬಾರಿ ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಈ ಹಿಂದೆ ಪ್ರಸಿದ್ಧಗೆ ಕನ್ನಡದಲ್ಲೇ ಕೆಎಲ್ ರಾಹುಲ್ ಬೌಲಿಂಗ್ ಸಲಹೆ ನೀಡಿದ್ದು ಇದೆ.
ಇಂದೂ ಕೂಡಾ ಪ್ರಸಿದ್ಧ ಕೃಷ್ಣ ಬೌಲಿಂಗ್ ಮಾಡುವಾಗ ರಾಹುಲ್ ಕನ್ನಡದಲ್ಲೇ ಸಲಹೆ ಸೂಚನೆ ನೀಡಿದ್ದು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಪ್ರಸಿದ್ಧ ಬೌಲಿಂಗ್ ಮೆಚ್ಚಿದ ರಾಹುಲ್ ಈ ಲೈನ್ ಚೆನ್ನಾಗಿದೆ ಮಗಾ.. ಮುಂದೆ ಹಾಕು ಎಂದು ಕನ್ನಡದಲ್ಲೇ ಮಾತನಾಡಿದ್ದಾರೆ.
ಇದಕ್ಕೆ ಪ್ರಸಿದ್ಧ ಕೂಡಾ ತಲೆಯಾಡಿಸುತ್ತಾ ಬೌಲಿಂಗ್ ಮಾಡಲು ತೆರಳಿದ್ದಾರೆ. ಈ ಮಾತುಗಳು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದ್ದು ಇಂಗ್ಲಿಷ್ ನೆಲದಲ್ಲಿ ನಮ್ಮ ಕನ್ನಡ ಕಸ್ತೂರಿ ಕೇಳಲು ಚಂದ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ