Publish Date: Fri, 17 Jul 2026 (09:40 IST)
Updated Date: Fri, 17 Jul 2026 (09:43 IST)
ಕಾರ್ಡಿಫ್: ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಂನ ವಿಡಿಯೋವೊಂದು ರೋಹಿತ್ ಶರ್ಮಾ ನಿವೃತ್ತಿಯ ಸುಳಿವು ನೀಡಿದೆ.
ರೋಹಿತ್ ಶರ್ಮಾ ಕಳೆದ ಎರಡೂ ಪಂದ್ಯಗಳಲ್ಲಿ ಆಡುವ ರೀತಿ ನೋಡಿದರೆ ಒತ್ತಡದಲ್ಲಿದ್ದಂತೆ ಕಂಡುಬರುತ್ತಿದೆ. ಎರಡೂ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಕೂಡಾ ಟೆಸ್ಟ್ ಶೈಲಿಯಲ್ಲಿತ್ತು. ರೋಹಿತ್ ಶರ್ಮಾರ ಮೊದಲಿನ ಹಿಟ್ ಮ್ಯಾನ್ ಅವತಾರ ಕಂಡುಬರುತ್ತಿಲ್ಲ.
ಇದೇ ಕಾರಣಕ್ಕೆ ಅವರು 2027 ರ ಏಕದಿನ ವಿಶ್ವಕಪ್ ಗೆ ಆಯ್ಕೆಯಾಗುವುದು ಡೌಟು ಎನ್ನಲಾಗುತ್ತಿದೆ. ಇದರ ನಡುವೆ ರೋಹಿತ್ ಶರ್ಮಾ ನಿವೃತ್ತಿಗೆ ಆಯ್ಕೆ ಸಮಿತಿ ಸೂಚನೆ ನೀಡಿರಬಹುದು ಎಂದು ಸುದ್ದಿಯಾಗುತ್ತಿದೆ. ಇದಕ್ಕೆ ತಕ್ಕಂತೆ ನಿನ್ನೆ ಪಂದ್ಯದ ನಡುವೆ ಕೊಹ್ಲಿ ಮತ್ತು ಬುಮ್ರಾ ಪಕ್ಕದಲ್ಲಿ ಕೂತಿದ್ದ ರೋಹಿತ್ ಏನೋ ಗಹನವಾಗಿ ಮಾತನಾಡುತ್ತಿದ್ದರು.
ವಿಶೇಷವಾಗಿ ವಿರಾಟ್ ಕೊಹ್ಲಿ ಮುಖದಲ್ಲಿ ತೀರಾ ಬೇಸರ ಎದ್ದು ಕಾಣುತ್ತಿತ್ತು. ಬುಮ್ರಾ ಕೂಡಾ ಗಂಭೀರವಾಗಿದ್ದರು. ಇದನ್ನು ನೋಡಿ ನೆಟ್ಟಿಗರು ಈಗ ರೋಹಿತ್ ಇಬ್ಬರಲ್ಲೂ ನಿವೃತ್ತಿಯ ಬಗ್ಗೆ ಹೇಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ರವಿಚಂದ್ರನ್ ಅಶ್ವಿನ್ ಕೂಡಾ ಆಸ್ಟ್ರೇಲಿಯಾ ವಿರುದ್ಧ ಸರಣಿ ನಡುವೆ ನಿವೃತ್ತಿ ಹೇಳಿದ್ದರು. ಈ ವೇಳೆ ಡ್ರೆಸ್ಸಿಂಗ್ ರೂಂನಲ್ಲಿ ಇದೇ ರೀತಿ ಕೊಹ್ಲಿ ಬಳಿ ಕೂತು ಅಶ್ವಿನ್ ತಮ್ಮ ನಿವೃತ್ತಿ ವಿಚಾರ ತಿಳಿಸಿದ್ದರು. ಇದೀಗ ರೋಹಿತ್ ಕೂಡಾ ಇದೇ ರೀತಿ ಕೊಹ್ಲಿ ಬಳಿ ಕೂತಿದ್ದು ನೋಡಿ ಅಭಿಮಾನಿಗಳು ನಿವೃತ್ತಿ ವಿಚಾರವಾಗಿರಬಹುದೇ ಎಂದು ಊಹಿಸುತ್ತಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ